ಜು.7ರಂದು ಮಾದಿಗರ ಆತ್ಮ ಗೌರವ ಜಾತ್ರೆ

ಬೆಂಗಳೂರು, ಜೂ.27- ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ 25ನೆ ವಾರ್ಷಿಕೋತ್ಸವ ಹಾಗೂ ಮಾದಿಗರ ಆತ್ಮ ಗೌರವ ಜಾತ್ರೆ ಕಾರ್ಯವನ್ನು ಜು.7ರಂದು ಆಂಧ್ರಪ್ರದೇಶದ ಚಲೋ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಈದುಮೂಡಿ ಗ್ರಾಮದಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಬಿ. ನರಸಪ್ಪ ದಂಡೋರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೆ ತರುವುದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕಿ ಗುರಿ ಮುಟ್ಟುವವರೆಗೆ ಹೋರಾಟ ಮಾಡಲು ಈ ಮಾದಿಗ ದಂಡೋರ ಸದಾ ಸಿದ್ಧವಿದೆ ಎಂಬುದನ್ನು ತೋರಿಸುವುದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವುದರ ಮೂಲಕ ನಮ್ಮ ಶಕ್ತಿ ತೋರಿಸುವುದಾಗಿ ತಿಳಿಸಿದರು.

20 ವರ್ಷಗಳಿಂದ ಎ.ಜೆ. ಸದಾಶಿವ ಆಯೋಗ ಜಾರಿ ಮಾಡುವಂತೆ ಹೋರಾಟ ಮಾಡಿದರೂ ಇದುವರೆಗೂ ಜಾರಿ ಮಾಡಿಲ್ಲ. ನಮ್ಮ ಜನಾಂಗದ ಅಭಿವೃದ್ಧಿಗಾಗಿ ಈ ಆಯೋಗವನ್ನ ಜಾರಿ ಮಾಡುವಂತೆ ಮನವಿ ಮಾಡಿದರು.

ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮುದಾಯದವರು ಭಾಗವಹಿಸುವಂತೆ ಮನವಿ ಮಾಡಿದರು.

ಸಮಿತಿಯ ಪದಾಧಿಕಾರಿಗಳಾದ ಆರ್‍ಸುಬ್ರಮಣಿ, ಕೆ.ಬಿ.ನರಸಿಂಹ, ಎಸ್.ರಾಮಕೃಷ್ಣ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ