ಜೂ.28ರಂದು ಮಹಿಳಾ ಛಾಯಾಗ್ರಾಹಕರಿಗೆ ಸನ್ಮಾನ ಸಮಾರಂಭ

Varta Mitra News

ಬೆಂಗಳೂರು, ಜೂ.19- ರಾಜ್ಯದಲ್ಲಿ ಅನೇಕ ಛಾಯಾಗ್ರಾಹಕರ ಸಂಘಗಳಿದ್ದು, ಎಲ್ಲವೂ ಪುರುಷ ಪ್ರಧಾನವಾಗಿವೆ. ಮಹಿಳೆಯರು ಕೂಡ ಛಾಯಾಗ್ರಾಹಣ ವೃತ್ತಿಯನ್ನು ಅವಲಂಭಿಸಿದ್ದಾರೆ ಈ ನಿಟ್ಟಿನಲ್ಲಿ ಕರ್ನಾಟಕ ಮಹಿಳಾ ಛಾಯಾಗ್ರಾಹಕರ ಸಂಘವನ್ನು ಕಟ್ಟಲಾಗಿದೆ.

ರಾಜ್ಯದಲ್ಲಿರುವ ಮಹಿಳಾ ಫೆÇೀಟೋಗ್ರಾಫರ್‍ಗಳು ಹಾಗೂ ವಿಡಿಯೋ ಗ್ರಾಫರ್‍ಗಳನ್ನು ಸಂಘಟಿಸುವ ಉದ್ದೇಶದಿಂದ ಕರ್ನಾಟಕ ಮಹಿಳಾ ಫೆÇೀಟೋಗ್ರಾಫರ್ ಅಸೋಸಿಯೇಶನ್ ಪ್ರಾರಂಭಿಸಲಾಗುತ್ತಿದ್ದು, ಜೂ.28ರಂದು ತುಮಕೂರು ರಸ್ತೆ ಬಿಐಇಸಿಯಲ್ಲಿ ನಡೆಯಲಿರುವ ಫೆÇೀಟೋ ಟುಡೆ-2019 ವಸ್ತು ಪ್ರದರ್ಶನದಲ್ಲಿ ಇದರ ಉದ್ಘಾಟನಾ ಸಮಾರಂಭ ನಡೆಯಲಿದೆ.
ಇದೇ ಸಂದರ್ಭದಲ್ಲಿ ಇಮೇಜ್ ಆಂಡ್ ಮಲ್ಟಿ ಮೀಡಿಯಾ ಅಕಾಡೆಮಿ ಟ್ರಸ್ಟ್ ವತಿಯಿಂದ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಮಹಿಳಾ ಛಾಯಾಗ್ರಾಹಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ