ಆಗಸ್ಟ್ 8ರಂದು ಎಂಎಸ್‍ಎಂಇ ಕೈಗಾರಿಕೋದ್ಯಮಿಗಳ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು, ಜೂ.19- ಪೀಣ್ಯ ಕೈಗಾರಿಕಾ ಸಂಘದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮಿಗಳ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಗಸ್ಟ್ 8ರಂದು ಹಮ್ಮಿಕೊಳ್ಳಲಾಗಿದೆ.

ಈ ಸಂಬಂಧ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಎಂ.ಎಂ.ಗಿರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಶವಂತಪುರದ ಹೊಟೇಲ್ ತಾಜ್ ವಿವಾಂತದಲ್ಲಿ ಆ. 8ರಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮಿಗಳಿಗೆ ಶ್ರೇಷ್ಟತಾ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ. ಕಾರ್ಯಕ್ರಮಕ್ಕೆ ಆಸ್ಟ್‍ಯರ್ ಮಿಡಿಯಾ ಸಹಯೋಗ ನೀಡಲಿದೆ ಎಂದು ತಿಳಿಸಿದರು.

ದೇಶದ ವ್ಯವಹಾರದಲ್ಲಿ ಶೇ.80ರಷ್ಟು ಭಾಗ ಸೂಕ್ಷ್ಮ ಹಾಗೂ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳದ್ದಾಗಿರುತ್ತದೆ. ಉದ್ಯೋಗವಕಾಶ ಹಾಗೂ ಆರ್ಥಿಕ ಕ್ಷೇತ್ರದ 1/3 ಭಾಗದಷ್ಟು ಕೊಡುಗೆ ನೀಡುತ್ತಾ ಬಂದಿದೆ ಎಂದರು.

ಉದ್ಯಮಿಗಳ ಪರಿಶ್ರಮ ಕಾರ್ಯ ತತ್ಪರತೆ ಮತ್ತು ಮಾರುಕಟ್ಟೆಯ ನೈಪುಣ್ಯತೆ ಹಾಗೂ ಅವರ ಪ್ರಸಿದ್ಧತೆ, ಪ್ರಖ್ಯಾತಿಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ.

ವಿಶೇಷವಾಗಿ ಪೀಣ್ಯ ಕೈಗಾರಿಕಾ ಪ್ರದೇಶ ಭಾಗದ ಉದ್ಯಮಿಗಳಿಗೆ ಈ ಪ್ರಶಸ್ತಿ ನೀಡುತ್ತೇವೆ. ಇನ್ನೂ ಈ ಭಾಗದಲ್ಲಿ ಸುಮಾರು 8 ಸಾವಿರ ಉದ್ಯಮಿಗಳಿದ್ದು ಇದರಲ್ಲಿ 50ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.

ಸಮಾರಂಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು, ಸಹ ಉದ್ಯೋಗ ಮಿತ್ರರು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಎಂ.ಎಂ.ಗಿರಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ