ಶ್ರೀ ಮಹಾಶರ್ಮಾಂಜಿ ಸ್ವಾಮಿಯವರಿಂದ ಅಹಿಂಸಾ ಯಾತ್ರೆ

ಬೆಂಗಳೂರು,ಜೂ.19- ಸಮರಸ, ನೈತಿಕತೆ, ವ್ಯಸನಮುಕ್ತಿ ಎಂಬ ಮೂರು ಅಹಿಂಸಾ ಧ್ಯೇಯವನ್ನಿಟ್ಟುಕೊಂಡು 3 ದೇಶಗಳು, 19 ವಿವಿಧ ರಾಜ್ಯಗಳು ಹಾಗೂ 19000ಕ್ಕಿಂತ ಹೆಚ್ಚು ಕಿಲೋಮಿಟರ್‍ಗಳ ಪ್ರಯಾಣ ಮಾಡುವ ಮೂಲಕ ಅಹಿಂಸಾ ಯಾತ್ರೆಯ ಪ್ರವರ್ತಕ ತೇರಾಪಂತ್ ಆಚಾರ್ಯ ಮಹಾಶರ್ಮಾಂಜಿ ಸ್ವಾಮಿ ಪ್ರವಾಸವನ್ನು ಕೈಗೊಂಡಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಆಚಾರ್ಯ ಮಹಾಶರ್ಮಾನ್ ಜೀ ಚರ್ತುಮಾಸ ಪರ್ವ ವ್ಯವಸ್ಥ ಸಮಿತಿಯ ಮುಖ್ಯಕಾರ್ಯದರ್ಶಿ ದೀಪ್‍ಚಂದ್ ನಹಾರ್ ಮಾತನಾಡಿ, ಜೂ.20ರಂದು ಆಚಾರ್ಯ ಮಹಾಶರ್ಮಾನ್‍ಜಿ ಬೆಂಗಳೂರಿಗೆ ಆಗಮಿಸಲಿದ್ದಾರೆ.ಸುಶೀಲ್‍ಧಾಮ್ ಅವರು ಗುರುಗಳನ್ನು ಹೊಸೂರು ರಸ್ತೆಯಲ್ಲಿ ಸ್ವಾಗತ ಕೋರಿ ಬರಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

50 ವರ್ಷಗಳ ಹಿಂದೆ 9ನೇ ತೇರಾಪಂಥ್ ಆಚಾರ್ಯ ತುಳಿಸಿ ಅವರು ಅನುವ್ರತ ಆಚರಣೆ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದರು. ಮಹಾಪ್ರಾಗ್ಯ, ಮನುಷ್ಯ ಮತ್ತು ಆತನ ವ್ಯಕ್ತಿತ್ವ ಕುರಿತು ಧ್ಯಾನ, ಜೀವನದಲ್ಲಿ ವಿಜ್ಞಾನ ವಿಚಾರ ಕುರಿತು ಹೊಸ ಪ್ರಯೋಗವನ್ನು ಆಚರಣೆಗೆ ತಂದಿದ್ದಾರೆ. ಇದಲ್ಲದೆ ಶಾಂತಿಯಲ್ಲಿ ವೈಭವ, ಕಲಿಕೆಯಲ್ಲಿ ವಿನಮ್ರತೆ, ಸರಳತೆಯಲ್ಲಿ ವಿಶೇಷ ಅಂಶಗಳಿಗೆ ಹೆಚ್ಚು ಪ್ರಾಧ್ಯಾನ್ಯತೆ ನೀಡಿ ತೇರಾಪಂಥ್‍ಗೆ ಮೆರಗು ನೀಡಲಿದ್ದಾರೆ ಎಂದರು.

ಜೂ.23ರಂದು ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ನಾಗರಿಕ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಇನ್ನು ಆಚಾರ್ಯ ಮಹಾಪ್ರಾಗ್ಯರ ಹುಟ್ಟುಹಬ್ಬವನ್ನು ಜೂ.30ರಂದು ಅಡಕಮಾರನಹಳ್ಳಿಯ ಭಿಕ್ಷಿಧಾಮದಲ್ಲಿ ಆಚರಿಸಿಕೊಳ್ಳಲಿದ್ದಾರೆ.ಜುಲೈ 3ರಂದು ಅಡಕಮಾರನಹಳ್ಳಿಯ ಭಿಕ್ಷಿ ಧಾಮದಲ್ಲಿ ದೀಕ್ಷೆ ಮಹೋತ್ಸವ ನಡೆಯಲಿದೆ.ಇದರಲ್ಲಿ 20 ಅನುಯಾಯಿಗಳು ದೀಕ್ಷೆ ಪಡೆದುಕೊಳ್ಳಲಿದ್ದಾರೆ. ಜುಲೈ 12ರಂದು ಕುಂಬಳಗೋಡದಲ್ಲಿರುವ ಆಚಾರ್ಯ ತುಳಸಿ ಮಹಾಪ್ರಾಘ್ಯ ಸೇವ ಚೇತನ ಕೇಂದ್ರದಲ್ಲಿ ಚರ್ತುಮಾಸಿಕ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಗೋಷ್ಟಿಯಲ್ಲಿ ಎಎಂಸಿಪಿವಿಎಸ್ ಅಧ್ಯಕ್ಷ ಮಾಲ್ ಚಂದ್ ನಹಾರ್, ಜಂಟಿ ಕಾರ್ಯದರ್ಶಿ ಸಂಜಯ್ ಬಂತಿಯಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ