ಪಥ ಬದಲಿಸಿದ ವಾಯು; ಗುಜರಾತ್ ಗೆ ತಪ್ಪಿದ ಭೀತಿ; ಕರ್ನಾಟಕ ಸೇರಿ ಹಲವೆಡೆ ಹೈ ಅಲರ್ಟ್​​

ಅಹ್ಮದಾಬಾದ್​: ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತದಿಂದ ‘ವಾಯು’ ಚಂಡಮಾರುತ ಹುಟ್ಟಿಕೊಂಡಿದ್ದು, ಇಂದು ಮಧ್ಯಾಹ್ನ ಗುಜರಾತ್​ ಕಾರವಳಿ ಸಮೀಪ ಹಾದು ಹೋಗಲಿದೆ. ಹಾಗಾಗಿ ಹಾನಿ ಪ್ರಮಾಣ ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ.

“ವಾಯು ಚಂಡಮಾರುತ ಗುಜರಾತ್​ಗೆ ಅಪ್ಪಳಿಸುವುದಿಲ್ಲ. ಆದರೆ, ವೆರಾವಲ್​, ಪೋರಬಂದರ ಹಾಗೂ ದ್ವಾರಕಾ ಕರಾವಳಿ ತೀರದ ಸಮೀಪ ಹಾದು ಹೋಗಲಿದೆ. ಈ ವೇಳೆ ಈ ಭಾಗದಲ್ಲಿ ಭಾರೀ ಗಾಳಿ-ಮಳೆ ಉಂಟಾಗಲಿದೆ,” ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಚಂಡಮಾರುತದ ವೇಗ 135-160 ಕಿ.ಮೀ ಇರಲಿದೆ. ಅಲ್ಲದೆ ಈ ಮಾರುತ 180 ಕಿ.ಮೀ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ. ಪೋರಬಂದರು, ಮಹುವಾ ಹಾಗೂ ಇತರ ಭಾಗದಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಲಾಗುತ್ತಿದೆ. 2.30 ಲಕ್ಷ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಈ ಭಾಗದಲ್ಲಿ ನಿಯೋಜನೆ ಮಾಡಲಾಗಿದೆ.

ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಮಲೆನಾಡು ಭಾಗದಲ್ಲಿ ಚಂಡಮಾರುತದ ಪ್ರಭಾವದಿಂದ ಮಳೆ ಆಗುಗುತ್ತಿದ್ದು, ಅದರಲ್ಲೂ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಹಾರಾಷ್ಟ್ರ, ಕರ್ನಾಟಕ ಸಮುದ್ರ ತೀರಗಳಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ