ಕಾರ್ನಾಡ್‍ರವರು ಶ್ರೇಷ್ಟ ನಾಟಕಕಾರ ಹಾಗೂ ಸಾಹಿತಿಯಾಗಿದ್ದರು

ಬೆಂಗಳೂರು, ಜೂ.11- ಜ್ಞಾನಪೀಠ ಪುರಸ್ಕøತ ಗಿರೀಶ್ ಕಾರ್ನಾಡ್ ಅವರ ನಿಧನದ ಹಿನ್ನೆಲೆಯಲ್ಲಿ ನಗರದ ಮಲ್ಲೇಶ್ವರಂನ ಜಯ ಕರ್ನಾಟಕ ಸಂಘಟನೆ ಕೇಂದ್ರ ಕಚೇರಿಯಲ್ಲಿ ಕಾರ್ನಾಡ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷ ಮೌನ ಆಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.

ಇದೇ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ಮಾತನಾಡಿ, ಗಿರೀಶ್ ಕಾರ್ನಾಡ್ ಅವರು, ಒಬ್ಬ ಶ್ರೇಷ್ಟ ನಾಟಕಕಾರ ಹಾಗೂ ಸಾಹಿತಿಯಾಗಿದ್ದರು.ಅವರ ಅಭಿಪ್ರಾಯಗಳೇ ವಿಭಿನ್ನವಾಗಿರುತ್ತಿತ್ತು ಎಂದು ಸ್ಮರಿಸಿದರು.

ತುಘಲಕ್, ಯಯಾತಿ, ಹಯವದನ, ತಲೆದಂಡ, ನಾಗಮಂಡಲ ಸೇರಿದಂತೆ ಹತ್ತಾರು ನಾಟಕಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದವರು ಕಾರ್ನಾಡ್ ಎಂದು ನೆನಪಿಸಿಕೊಂಡರು.

ಗಿರೀಶ್ ಕಾರ್ನಾಡ್ ಅವರು ಹಲವು ಚಿತ್ರಗಳಲ್ಲಿ ನಟಿಸಿ, ನಿರ್ದೇಶನವನ್ನು ಸಹ ಮಾಡಿದ್ದಾರೆ. ಅವರು ಒಂದು ಭಾಷೆಗೆ ಸೀಮಿತವಾಗಿರಲಿಲ್ಲ. ಕನ್ನಡ , ಹಿಂದಿ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಿದರು.

ನಂತರ ಮುಖ್ಯ ಆಡಳಿತಾಧಿಕಾರಿ ಕುಮಾರಸ್ವಾಮಿ ಮಾತನಾಡಿ,ಗಿರೀಶ್ ಕಾರ್ನಾಡ್ ಅವರು ಅದ್ಭುತ ನಾಟಕಕಾರ. ಅವರ ಅಗಲಿಕೆಯಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಬೆಂಗಳೂರು ಮಹಾನಗರ ಜಿಲ್ಲಾಧ್ಯಕ್ಷ ಕೆ.ಎನ್.ಜಗದೀಶ್ ಮಾತನಾಡಿ, ಕಾರ್ನಾಡ್ ಚಿತ್ರವೆಂದರೆ ಸಮಾಜಕ್ಕೆ ಸಂದೇಶ ನೀಡುವಂತಹದಾಗಿದ್ದವು ಅವರ ಸೇವೆ ಕನ್ನಡ ನಾಡಿಗೆ ಇನ್ನಷ್ಟು ಅಗತ್ಯವಿತ್ತು ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯಪ್ರಧಾನ ಕಾರ್ಯದರ್ಶಿ ಎಚ್.ರಾಮಚಂದ್ರಯ್ಯ, ಸಲಹಾ ಸಮಿತಿ ಸದಸ್ಯರಾದ ಶೆ. ಭೋ.ರಾಧಾಕೃಷ್ಣ, ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್ ರೈ, ಪ್ರಧಾನ ಕಾರ್ಯದರ್ಶಿ ವೀರಭದ್ರೆಗೌಡ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ರಾಹುಲ್ ಸೇರಿದಂತೆ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ