ಜುಲೈ 1ರಿಂದ ಹಿಂದಿ ತೊಲಗಿಸಿ ಕನ್ನಡ ಉಳಿಸಿ ಆಂದೋಲನ

ಬೆಂಗಳೂರು,ಜೂ.10- ಹಿಂದಿ ಹೇರಿಕೆ ವಿರುದ್ದ ತ್ರಿಭಾಷ ಸೂತ್ರ ತಿರಸ್ಕರಿಸಿ ಜುಲೈ 1ರಿಂದ ರಾಜ್ಯಾದ್ಯಂತ ಹಿಂದಿ ತೊಲಗಿಸಿ ಕನ್ನಡ ಉಳಿಸಿ ಆಂದೋಲನವನ್ನು ಹಮ್ಮಿಕೊಳ್ಳಲು ದ್ರಾವಿಡ ಜನಶಕ್ತಿ ನಿರ್ದರಿಸಿದೆ .

ಸುದ್ದಿಗೋಷ್ಠಿಯಲ್ಲಿ ಜನಶಕ್ತಿಯ ಅಧ್ಯಕ್ಷ ಹೆಣ್ಣೊರು ಲಕ್ಷ್ಮೀನಾರಾಯಣ ಮಾತನಾಡಿ, ಹಿಂದಿ ಹೇರಿಕೆಯನ್ನು ಮೋದಿ ಸರ್ಕಾರವು ತನ್ನ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಮತ್ತಷ್ಟು ಗಟ್ಟಿಗೊಳಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದರು.

ಬಹುತೇಕ ಸ್ಪರ್ಧೆ ಪರಿಕ್ಷೆಗಳಲ್ಲಿ ಅನಿವಾರ್ಯವಾಗಿ ಹಿಂದಿಯ ಅಧಿಪತ್ಯವನ್ನೇ ಪ್ರತಿಪಾದಿಸುತ್ತವೆ ಅದರಿಂದ ಮೂರನೇ ಭಾಷೆಯಾಗಿ ಮಕ್ಕಳು ಭಾಷೆಯಾಗಿ ಮಕ್ಜಳು ಹಿಂದಿಯನ್ನ ಹೊರತಾಗಿ ಯೋಚಿಸುವುದಕ್ಕೊ ಸಾಧ್ಯವಿಲ್ಲದ ಪರಿಸ್ಥಿತಿಯನ್ನ ಕೇಂದ್ರ ಸರ್ಕಾರ ನಿರ್ಮಿಸುತ್ತಿದೆ ಇದು ಸರಿಯಲ್ಲ ಎಂದು ಹೇಳಿದರು.

ಇದನ್ನು ಇಲ್ಲಿಗೆ ಕೈ ಬಿಡಬೇಕು.ಹಿಂದಿಯನ್ನು ಬಲವಂತವಾಗಿ ದ್ವಿಭಾಷೆಯನ್ನಾಗಿ ತರುವುದು ಸರಿಯಲ್ಲ. ನಮ್ಮ ಭಾಷೆಗೆ ಬಹಳಷ್ಟು ಇತಿಹಾಸವೇ ಇದೆ ಹಿಂದಿ ಭಾಷೆಯನ್ನು ತಂದು ನಮ್ಮ ಸಂಸ್ಕೃತಿಯನ್ನು ಮರೆಸುವಂತೆ ಆಗಬಾರದು ಅದರಿಂದ ಹಿಂದಿ ತ್ರಿಭಾಷಾ ಸೂತ್ರ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ