ಮಾರ್ಗಭಂಜಕ ಶಸ್ತ್ರ ಚಿಕಿತ್ಸೆ-ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ ಮಲ್ಲೇಶ್ವರದ ಮಣಿಪಾಲ್ ಆಸ್ಪತ್ರೆ

ಬೆಂಗಳೂರು, ಜೂ.6-ನರತಂತು ಜಾಲವನ್ನೊಳಗೊಂಡ ಜನ್ಮಜಾತ ತೊಂದರೆಯಿಂದ ಬಳಲುತ್ತಿದ್ದ ಮೂರು ತಿಂಗಳ ಮಗುವಿಗೆ ನೂತನ ಜೀವನದ ಭರವಸೆ ನೀಡುವುದಕ್ಕಾಗಿ ಜೀವ ಉಳಿಸುವ ಮಾರ್ಗಭಂಜಕ ಶಸ್ತ್ರ ಚಿಕಿತ್ಸೆಯನ್ನು ಮಲ್ಲೇಶ್ವರದ ಮಣಿಪಾಲ ಆಸ್ಪತ್ರೆ ಯಶಸ್ವಿಯಾಗಿ ನಡೆಸಿದೆ.

ಸುದ್ದಿಗೋಷ್ಠಿಯಲ್ಲಿ ಆಸತ್ರೆಯ ಸೂಕ್ಷ್ಮರಕ್ತನಾಳಗಳ ಶಸ್ತ್ರಚಿಕಿತ್ಸಾ ತಜ್ಞ ಡಾ.ಭರತ ಕಡಾಡಿ ಮಾತನಾಡಿ, ಶಿಶು ಅತ್ಯಂತ ಅಪರೂಪದ ವೈದ್ಯಕೀಯ ಸ್ಥಿತಿಯಾದ ಬ್ರೇಖಿಯಲ ಪ್ಲೆಕ್ಸಸ್ ಬರ್ತ್ ಪಾಲ್ಸಿ ಎಂಬ ನರತಂತು ಜಾಲವನ್ನೊಳಗೊಂಡ ಜನ್ಮಜಾತ ತೊಂದರೆಯಿಂದ ಬಳಲುತ್ತಿತ್ತು. ಶಿಶುವಿನ ಎಡಗೈ ಮತ್ತು ಭುಜಗಳ ಚಲನೆ ಸಂಪೂರ್ಣ ನಿರ್ಬಂಧಿತವಾಗಿತ್ತು. ಕುತ್ತಿಗೆ ಮತ್ತು ಕೈ ಮೇಲ್ಭಾಗವನ್ನು ಜೋಡಿಸುವ ನರತಂತುಗಳ ಜಾಲಕ್ಕೆ ಬ್ರೇಖಿಯಲ್ ಪ್ಲೆಕ್ಲಸ್ ಎನ್ನುತ್ತಾರೆ. ಕೈ ಮೇಲ್ಭಾಗದ ಕಾರ್ಯ ಭುಜ ಮೊಣಕೈ ಮಣಿಕಟ್ಟು ಮತ್ತು ಒಟ್ಟಾರೆ ಕೈ ಚಲನೆಯ ಜವಾಬ್ದಾರಿ ಇದರದ್ದಾಗಿರುತ್ತದೆ. ಶಿಶು ಜನನವಾಗುವ ಪ್ರಕ್ರಿಯೆಯಲ್ಲಿ ಇವುಗಳಿಗೆ ಗಾಯವಾಗಬಹುದು ಅಥವಾ ಇವು ಹಿಗ್ಗಿ ಹಾನಿಗೊಳಗಾಗಬಹುದು.ಇದರಿಂದ ಕೈಗೆ ಸಂಪೂರ್ಣ ಅಥವಾ ಭಾಗಶಃ ಪಾಶ್ರ್ವವಾಯು ತೊಂದರೆ ಕಾಡಬಹುದು.

ದೊಡ್ಡಗಾತ್ರದ ಶಿಶುಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಪೀಡಿತ ಭಾಗದಲ್ಲಿನ ಕೈಯಲ್ಲಿ ಚಲನೆಯಿಲ್ಲದಿರುವುದು ಅಥವಾ ಹಿಡಿತ ಇಲ್ಲದಿರುವುದನ್ನು ಗಮನಿಸಬಹುದು ಎಂದು ವಿವರಿಸಿದರು.

ಈ ಶಿಶುವನ್ನು ಉಳಿಸಲು ನಮ್ಮ ತಂಡದೊಂದಿಗೆ ಸತತ ಐದು ಗಂಟೆಗಳ ತೀವ್ರ ಶಸ್ತ್ರ ಚಿಕಿತ್ಸೆ ನಡೆಸಿ ಎಕ್ಸ್‍ರೇ ಎಂಆರ್‍ಐ ಸ್ಕ್ಯಾನ್ ನಡೆಸಿ ಫಿಜಿಯೋಥೆರಪಿ ಕಾರ್ಯಕ್ರಮದ ನಂತರ ಆಕೆ ಸಾಮಾನ್ಯ ಜೀವನ ನಡೆಸುತ್ತಿದ್ದಾಳೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ