ಯಾವುದೇ ಸ್ಥಾನ ನೀಡಿದರೂ ಸಂತಸದಿಂದ ನಿಭಾಯಿಸುತ್ತೇನೆ: ಸಂಸದ ಡಿ.ವಿ.ಸದಾನಂದಗೌಡ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನೂತನ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸಂಸದ ಡಿ ವಿ ಸದಾನಂದಗೌಡ, ಸಂಪುಟದಲ್ಲಿ ಯಾವುದೇ ಸ್ಥಾನವನ್ನು ನೀಡಿದರೂ ಸಂತಸದಿಂದ ನಿಭಾಯಿಸುತ್ತೇನೆ. ಅದು ನನಗೆ ದೊಡ್ಡ ಸ್ಥಾನಮಾನವಾಗಿದೆ ಎಂದಿದ್ದಾರೆ.

ಮಂತ್ರಿ ಮಂಡಲದ ರಚನೆ ಪ್ರಧಾನಿಯವರಿಗೆ ಸೇರಿದ್ದು. ಅವರ ತಂಡದಲ್ಲಿ ಯಾರು ಇರಬೇಕು ಎಂದು ಅವರು ನಿರ್ಧರಿಸುತ್ತಾರೆ. ನನಗೆ ಅವಕಾಶ ನೀಡುತ್ತಿದ್ದು ನಾನು ನನ್ನ ಶಕ್ತಿ ಮೀರಿ ಕೆಲಸ ಮಾಡುವುದಾಗಿ ತಿಳಿಸಿದರು.

ಆಡಳಿತ ಸೂತ್ರಗಳನ್ನು ಹೇಗೆ ನಡೆಸಬೇಕು ಎಂದು ಹೇಳಲು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಈ ಎರಡು ಜೋಡಿಗಿಂತ ದೊಡ್ಡ ಉದಾಹರಣೆ ಈ ಶತಮಾನದಲ್ಲಿ ಈ ದೇಶದಲ್ಲಿ ಬರಲು ಸಾಧ್ಯವಿಲ್ಲ ಎಂದು ಶ್ಲಾಘಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ