ಥಣಿಸಂದ್ರ ವಾರ್ಡ್ ಆಗಲಿದೆ ಮಾದರಿ ವಾರ್ಡ್

ಬೆಂಗಳೂರು, ಮೇ 25- ಒಂದೆರಡು ವರ್ಷಗಳಲ್ಲಿ ಥಣಿಸಂದ್ರ ವಾರ್ಡ್‍ನ್ನು ಮಾದರಿ ವಾರ್ಡ್ ಆಗಿ ಪರಿವರ್ತಿಸುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದರು.

ಉಪಮೇಯರ್ ಭದ್ರೇಗೌಡ, ಮತ್ತಿತರರೊಂದಿಗೆ ಥಣಿಸಂದ್ರ ವಾರ್ಡ್‍ಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಾಮಾಜಿಕ ತಾಣಗಳಲ್ಲಿ ಥಣಿಸಂದ್ರ ವಾರ್ಡ್ ಅತಿ ಹಿಂದುಳಿದ ವಾರ್ಡ್ ಎಂದು ಬಿಂಬಿತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು.

ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಯಲಹಂಕ ವಲಯಕ್ಕೆ ಸಾಕಷ್ಟು ಅನುದಾನ ಸಿಕ್ಕಿದೆ. ಈಗ ಸಚಿವ ಕೃಷ್ಣಬೈರೇಗೌಡ ಕೂಡಾ ಈ ವಾರ್ಡ್ ಬಗ್ಗೆ ಆಸಕ್ತಿ ತೋರಿದ್ದಾರೆ. ಅನುದಾನ ಬಳಸಿ ಒಳಚರಂಡಿ ವ್ಯವಸ್ಥೆ, ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು ಎಲ್ಲವೂ ಪ್ರಗತಿಯಲ್ಲಿದೆ. ಇನ್ನೂ ಒಂದೆರಡು ವರ್ಷಗಳಲ್ಲಿ ಥಣಿಸಂದ್ರ ವಾರ್ಡ್ ಮಾದರಿ ವಾರ್ಡ್ ಆಗಲಿದೆ ಎಂದು ಮೇಯರ್ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ