ಸುಸ್ತಾದರೋ….ಸುಸ್ತಾದರೋ….

ಬೆಂಗಳೂರು, ಮೇ.23-ಫಲಿತಾಂಶ ಹಾಗಿದೆ. ಪಕ್ಷದ ಆದೇಶದಂತೆ ಕೆಲಸ ಮಾಡಿದ ಕಾರ್ಯಕರ್ತರು, ತಮ್ಮ ನೆಚ್ಚಿನ ನಾಯಕರಿಗೆ ಮತ ಚಲಾಯಿಸಿದ ಪ್ರಜೆಗಳು, ದೇಶದ ಪರಿವರ್ತನೆಗೆ ಶ್ರಮಿಸಿದ ಆರ್‍ಎಸ್‍ಎಸ್ ಸ್ವಯಂ ಸೇವಕರು ಸೇರಿದಂತೆ ದೇಶದ ಬಹುತೇಕರು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಕಂಡು ಬೆರಗಾಗಿ ಬಿಟ್ಟಿದ್ದಾರೆ.

ಅಂದುಕೊಂಡಂತೆ, ಸಮೀಕ್ಷೆಗಳು ಹೇಳಿದಂತೆ ರಾಜಕೀಯ ಫಲಿತಾಂಶಗಳು ಗೋಚರವಾಗುತ್ತವೆ ಎಂದು ಈವರೆಗೆ ಜನ ಸಾಮಾನ್ಯರು ನಂಬಿದ್ದೇ ಹೆಚ್ಚು. ಆದರೆ ತಮ್ಮ ಒಂದು ಮತದ ಶಕ್ತಿ ದೇಶದಲ್ಲಿ ಭಾರೀ ಬದಲಾವಣೆ ಈ ಮಟ್ಟದಲ್ಲಿ ತರಬಹುದು ಎಂಬುದನ್ನು ಊಹಿಸದೆ ಫಲಿತಾಂಶವನ್ನು ನೋಡಿ ಸುಸ್ತಾಗಿ ಬಿಟ್ಟಿದ್ದಾರೆ.

ಪಕ್ಷಗಳ ಕಾರ್ಯಕರ್ತರಂತೂ ತಮ್ಮ ಕಾರ್ಯವೈಖರಿಯ ವಿಶ್ವಾಸವನ್ನು ಮೀರಿ ಪ್ರಕಟವಾಗಿರುವ ಫಲಿತಾಂಶ ನೋಡಿ ಸುಸ್ತಾಗಿ ಬಿಟ್ಟಿದ್ದಾರೆ.

ದೇಶಾದ್ಯಂತ ಮತಗಳ ಪ್ರಮಾಣವನ್ನು ಶೇ 57ರಷ್ಟು ಪಡೆದಿರುವುದು ಮತ್ತೊಂದು ಸಾಧನೆಯಾದರೆ, ಕರ್ನಾಟಕದಲ್ಲಿ ಸುಮಲತಾ, ಅಮೇಥಿಯಲ್ಲಿ ಸ್ಮøತಿ ಇರಾನಿ ಗೆಲುವು, ಉತ್ತರ ಪ್ರದೇಶದಂತ ದೊಡ್ಡ ರಾಜ್ಯದಲ್ಲಿ ಐತಿಹಾಸಿಕ ಕಾಂಗ್ರೇಸ್ ಒಂದೇ ಸ್ಥಾನ ಗಳಿಸಿರುವುದು, ಈಶಾನ್ಯ ಸೇರಿದಂತೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರಚಂಡ ಗೆಲವು ಕಂಡ ಬಿಜೆಪಿ ಸಾಧನೆ ಸಾರ್ವಜನಿಕ ವಲಯದಲ್ಲಿ ಸುಸ್ತಾಗುವಂತೆ ಮಾಡಿದೆ. ಹಾಗೆಯೇ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೇಸ್ ಶೂನ್ಯ ಸಾಧನೆ ಸುಸ್ತಾಗುವಂತೆ ಮಾಡಿದೆ.


ಪ್ರಧಾನಿ ಮೋದಿ ಬಗ್ಗೆ ಟೀಕೆ ಮಾಡುತ್ತಿದ್ದವರೆಲ್ಲಾ ಈ ಫಲಿತಾಂಶ ನೋಡಿ ನಿಬ್ಬೆರಗಾಗಿ  ಸುಸ್ತಾಗಿ ಮಲುಗುವಂತೆ ಮಾಡಿದೆ.

ಕರ್ನಾಟಕದಲ್ಲಿ ಘಟಾನುಘಟಿಗಳೆಂದೆ ಹೆಸರಾದ ನಾಯಕರು ಹೊಸ ಅಭ್ಯರ್ಥಿಗಳ ಎದುರು ಸೋತು ಸುಣ್ಣವಾಗಿದ್ದರೆ, ಈಗ ತಾನೆ ರಾಜಕೀಖಯದಲ್ಲಿ ಕಣ್ಣು ಬಿಡುತ್ತಿರುವ ಬಾಲ ಸೂರ್ಯನೊಬ್ಬ ಭಾರೀ ಗೆಲವು ಸಾಧಿಸಿರುವುದು ಕಂಡು ಮತದಾರ ಮತ್ತು ರಾಜಕೀಯ ನಾಯಕರು ದಂಗಾಗಿ ಬಿಟ್ಟಿದ್ದಾರೆ. ಸ್ವತಃ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಈ ಫಲಿತಾಂಶಗಳು ಅನಿರೀಕ್ಷಿತ ಆದರೆ ತೀರ್ಪನ್ನು ಗೌರವಿಸುತ್ತೇವೆ, ಗೆಲುವಿಗೆ ಪ್ರಧಾನಿಯವರನ್ನು ಅಭಿನಂದಿಸುತ್ತೇವೆ ಎಂಬ ಮಾತುಗಳು ಸಾಂಪ್ರದಾಯಿಕವಾಗಿದ್ದರೂ ಫಲಿತಾಂಶದ ಪ್ರಭಾವಕ್ಕೆ ಸುಸ್ತಾಗಿರುವುದು ಅವರ ಮುಖ ಲಕ್ಷಣದಲ್ಲಿ ಕಂಡು ಬರುತ್ತಿತ್ತು.

ಇದೇ ವೇಳೆ ರಾಜ್ಯ ಕಾಂಗ್ರೇಸ್ ಅಧ್ಯಕ್ಷ ದಿನೇಶ್ ಗುಂಡುರಾವ್ ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ಸುದ್ಧಿಯು ಪರಿಸ್ಥಿತಿಗೆ ಸಾಕ್ಷಿಯಾದಂತೆ ಇದೆ.

ಇತ್ತ ಎಐಸಿಸಿ ಅಧ್ಯಕ್ಷರು 2ನೇ ಬಾರಿಗೆ ಸೋತಿರುವುದು ಕಾಂಗ್ರೇಸ್‍ನ್ನು ಸುಸ್ತಾಗುವಂತೆ ಮಾಡಿದರೆ ಇತ್ತ ಬಿಜೆಪಿ ಕಾರ್ಯಕರ್ತರು, ನಾಯಕರು ತಮ್ಮ ನಿರೀಕ್ಷೆಗೂ ಮೀರಿದ ಫಲಿತಾಂಶದಿಂದ ತೀವ್ರ ಸಂಭ್ರಮದಿಂದ ಸುಸ್ತಾಗಿದ್ದಾರೆ. ಸಂಘ ಪರಿವಾರದ ಕಾರ್ಯಕರ್ತರು, ನಾಯಕರು ತಮ್ಮ ಸತತ ಪರಿಶ್ರಮಕ್ಕೆ ಆತಂಕದ ನಡುವೆ ಬೆರುಗಿನ ಫಲಿತಾಂಶ ಕಂಡು ಅವರು ಸುಸ್ತಾಗಿದ್ದಾರೆ.

Lok Sabha Election Result 2019

Party Name Wins Lead Wins + Lead
NDA 94 253 347
UPA 26 63 89
Others 7 99 106
Total Number of Seats in Lok Sabha 543 / 542

 

NDA UPA
BJP 299 INC 51
SHS 18 RJD 0
JD(U) 16 NCP 5
AIADMK 1 JAP 0
AGP 0 JD(S) 1
SAD 2 DMK 23

State Result

Party Name Wins Lead Wins + Lead
BJP 25 0 25
INC 1 0 1
JD(S) 1 0 1
BSP 0 0 0
Others 1 0 1
Total Number of Seats in Karnataka 28 / 28

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ