ಪಾಕಿಸ್ತಾನಕ್ಕೆ ಜೆಎಫ್-17 ಯುದ್ಧ ವಿಮಾನ ಪೂರೈಸಿದ ಚೀನಾ

ಬೀಜಿಂಗ್/ಇಸ್ಲಾಮಾಬಾದ್, ಮೇ 22- ಪಾಕಿಸ್ತಾನ ವಾಯು ಪಡೆ(ಪಿಎಎಫ್)ಗೆ ಚೀನಾ ಬಹು ಪಾತ್ರ ನಿರ್ವಹಿಸುವ ಜೆಎಫ್-17 ಯುದ್ದ ವಿಮಾನದ ಮೊದಲ ಫೈಟರ್‍ಜೆಟ್‍ನನ್ನು ಪೂರೈಸಿದೆ. ಇದರಿಂದ ಪಾಕ್ ಸೇನಾ ಸಾಮಥ್ರ್ಯ ವೃದ್ಧಿಯಾಗಿದೆ.

ಈ ಶ್ರೇಣಿಯ ಸಮರ ವಿಮಾನಗಳ ಅಭಿವೃದ್ಧಿ ಮತ್ತು ತಯಾರಿಕೆಗಾಗಿ ದಶಕದ ಹಿಂದೆಯೇ ಈ ಎರಡು ದೇಶಗಳ ನಡುವೆ ಯೋಜನೆಗಾಗಿ ಒಪ್ಪಂದವಾಗಿತ್ತು. ಅದರ ಭಾಗವಾಗಿ ಇಸ್ಲಾಮಾಬಾದ್‍ಗೆ ಬೀಜಿಂಗ್ ಪ್ರಥಮ ಜೆಎಫ್-17 ಫೈಟರ್‍ಜೆಟ್ ನೀಡಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಚೀನಾ ಮತ್ತು ಪಾಕಿಸ್ತಾನ ಹತ್ತು ವರ್ಷದಿಂದಲೂ ಏಕ ಎಂಜಿನ್‍ನ ಎಫ್-17 ಜೆಟ್ ಮಾನಗಳ ಜಂಟಿ ಅಭಿವೃದ್ದಿ ಮತ್ತು ತಯಾರಿಕೆಯಲ್ಲಿ ತೊಡಗಿದ್ದವು.

2007ರಲ್ಲಿ ಚೀನಾ ಇದೇ ಶ್ರೇಣಿಯ ಹಳೆ ಮಾದರಿ ವಿಮಾನಗಳನ್ನು ಪಾಕಿಸ್ತಾನಕ್ಕೆ ಪೂರೈಸಿತ್ತು. ಈಗ ಮೇಲ್ದರ್ಜೆಯೊಂದಿಗೆ ಜೆಎಫ್-17 ಯುದ್ಧ ವಿಮಾನದ ಮೊದಲ ಜೆಟ್‍ನನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಖ್ಯೆ ಪಿಎಎಫ್‍ಗೆ ಸೇರ್ಪಡೆಯಾಗಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ