ಮನಸ್ಸಿನ ಸಮತ್ವ ಸಾಧಿಸಲು ಧ್ಯಾನ ಒಂದು ಸಾಧನ-ಶ್ರೀ ರವಿಶಂಕರ್ ಗುರೂಜಿ

ಬೆಂಗಳೂರು, ಮೇ 20- ಮನಸ್ಸಿನ ಸಮತ್ವದಿಂದ ರೋಗಿಗಳ ಸಮಸ್ಯೆಗಳನ್ನು ಅರಿಯುವ ಸಂವೇದನೆ ಬೆಳೆಯುತ್ತದೆ. ಹಾಗಾಗಲು ನಿರಂತರ ಧ್ಯಾನದ ಅವಶ್ಯಕತೆ ಇದೆ ಎಂದು ಆರ್ಟ್ ಆಪ್ ಲಿವೀಂಗ್ನ ಶ್ರೀ ರವಿಶಂಕರ ಗುರೂಜಿ ಹೇಳಿದರು.

ಶ್ರೀ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆದ (ವಿಶಿಖಾನು ಪ್ರವೇಶ 2019ರ) ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸಿನ ಸಮತ್ವ ಸಾಧಿಸಲು ಧ್ಯಾನ ಒಂದು ಪರಿಪೂರ್ಣ ಸಾಧನ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೇಂದ್ರೀಯ ಭಾರತೀಯ ಚಿಕಿತ್ಸಾ ಪರಿಷತ್ತಿನ ಅಧ್ಯಕ್ಷ ಡಾ.ಜಯಂತ ಯವಶವಂತ್ ದೇವ್ ಪೂಜಾರಿ, ಜ್ಞಾನವು ಕಾಲಕ್ರಮೇಣ ಪ್ರಾಪ್ತಿಯಾಗುತ್ತದೆ. ವಿದ್ಯಾರ್ಥಿಗಳ ಜಿಜ್ಞಾಸೆ-ಪ್ರಶ್ನೆ ಎರಡೂ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಸಚ್ಚಿದಾನಂದ, ಶ್ರೀ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರಮೇಶ್ ಭಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದೇ ವೇಳೆ ಡಾ.ದೀಪಿಕಾ ಅತ್ಯುತ್ತಮ ಇಂಟರ್ನಿ, ಡಾ.ಬಿ.ಎಸ್.ಬಿಂದು ಎಲ್ಲ ವಿಭಾಗದಲ್ಲಿ ಮಹಾವಿದ್ಯಾಲಯಕ್ಕೆ ಪ್ರಥಮ ಶ್ರೇಣಿ ಹಾಗೂ ರಾಷ್ಟ್ರೀಯಯುವ ಸಂಸತ್ತಿನಲ್ಲಿ ದೇಶಕ್ಕೆ ಎರಡನೇ ಸ್ಥಾನ ಪಡೆದ ಡಾ.ಆಂಜನಾಕ್ಷಿಯವರನ್ನು ಸಮ್ಮಾನಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ