ವಿದ್ಯುತ್ ಕಳ್ಳತನ ಪ್ರಕರಣ-ಚೆಸ್ಕ್ ಜಾಗೃತ ದಳದಿಂದ ಕಾರ್ಯಾಚರಣೆ

ಮೈಸೂರು,ಮೇ 16- ವಿದ್ಯುತ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚೆಸ್ಕ್ ಜಾಗೃತ ದಳ ಕಾರ್ಯಾಚರಣೆ ನಡೆಸಿ ಕೈಗಾರಿಕೆಗಳು ಸೇರಿದಂತೆ ಹಲವು ಮನೆಗಳಲ್ಲಿ ಅಕ್ರಮ ಸಂಪರ್ಕ ಹೊಂದಿರುವುದನ್ನು ಪತ್ತೆಹಚ್ಚಿ ಒಟ್ಟು 247 ಪ್ರಕರಣ ದಾಖಲಿಸಿಕೊಂಡು 1, 23,36,414 ರೂ. ದಂಡ ವಿಧಿಸಿದೆ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಮಡಿಕೇರಿ ವ್ಯಾಪ್ತಿಯ ವಿವಿಧ ವಿದ್ಯುತ್ ಸ್ಥಾವರಗಳ ಪೈಕಿ ಗೃಹಬಳಕೆ, ಕೈಗಾರಿಕಾ ಘಟಕಗಳು ಮತ್ತು ತಾತ್ಕಾಲಿಕ ವಿದ್ಯುತ್ ಸ್ಥಾವರಗಳ ಗ್ರಾಹಕರ ವಿರುದ್ಧ ಒಟ್ಟು 247 ವಿದ್ಯುತ್ ಅಕ್ರಮ ಸಂಪರ್ಕದ ದುರುಪಯೋಗ ಪ್ರಕರಣವನ್ನು ದಾಖಲಿಸಿ ದಂಡ ವಿಧಿಸಿದೆ.

ಮಾರ್ಚ್ ತಿಂಗಳಲ್ಲಿ 54 ವಿದ್ಯುತ್ ಕಳ್ಳತನ ಪ್ರಕರಣ, 68 ವಿದ್ಯುತ್ ದುರುಪಯೋಗ ಪ್ರಕರಣ ಸೇರಿದಂತೆ 122 ಪ್ರಕರಣವನ್ನು ಪತ್ತೆಹಚ್ಚಿ 60.68 ಲಕ್ಷ ರೂ.ದಂಡ ವಸೂಲಿ ಮಾಡಿದೆ.

ಏಪ್ರಿಲ್‍ನಲ್ಲಿ 52 ವಿದ್ಯುತ್ ಕಳವು ಪ್ರಕರಣ, 73 ವಿದ್ಯುತ್ ದುರುಪಯೋಗ ಪ್ರಕರಣ ಸೇರಿದಂತೆ ಒಟ್ಟು 125 ಪ್ರಕರಣಗಳಲ್ಲಿ 62.67 ಲಕ್ಷ ರೂ. ದಂಡ ವಿಧಿಸಿ ವಸೂಲಿಗೆ ಮುಂದಾಗಿದೆ.

ವಿದ್ಯುತ್ ಕಳ್ಳತನ, ಅಕ್ರಮ ವಿದ್ಯುತ್ ಸಂಪರ್ಕ ಕಂಡುಬಂದಲ್ಲಿ ಸಾರ್ವಜನಿಕರು ಎಸ್ಪಿ ಅವರ ದೂ: 0821-2342708, ಮೊ: 9448849964ನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಚೆಸ್ಕಾಂ ವಿಜಿಲೆನ್ಸ್ ಸೂಪರಿಡೆಂಟ್ ಆಫ್ ಪೆÇಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ