ಅತ್ಯಾಚಾರ ಮುಕ್ತ ಭಾರತ ಮಾಡಲು ಸಂಸದರು ಧ್ವನಿಯೆತ್ತಬೇಕು

ಬೆಂಗಳೂರು, ಮೇ 10- ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ರಾಜಕೀಯ ವ್ಯಕ್ತಿಗಳು ಅತ್ಯಾಚಾರ ಮುಕ್ತ ಭಾರತ ಮಾಡಲು ಸಂಸತ್‍ನಲ್ಲಿ ಧ್ವನಿ ಎತ್ತಲು ಹೋರಾಟ ಮಾಡುವಂತೆ ಸ್ಪಂಧನ ಸಂಸ್ಥೆ ಪ್ರಮಾಣ ಚಳವಳಿ ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಸುಶೀಲಾ, ಕಳೆದ ಮೂರು ತಿಂಗಳಿಂದ ಈ ಪ್ರಮಾಣ ಚಳವಳಿ ನಡೆಯುತ್ತಿದ್ದು, ಇದುವರೆಗೂ ಸುಮಾರು 26 ಅಭ್ಯರ್ಥಿಗಳು ಸಹಿ ಮಾಡಿದ್ದು ಇನ್ನೂ ಕೆಲವರು ಸಮಯ ಕೇಳಿದ್ದಾರೆ ಎಂದು ತಿಳಿಸಿದರು.

ಬಹಳ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಮಕ್ಕಳ ಮೇಲೆ ನಡೆಯುತ್ತಿರುವ ಹೀನಕೃತ್ಯಗಳ ವಿರುದ್ಧ ಹಲವು ಆಂದೋಲನ, ಚಳವಳಿ, ಹೋರಾಟ ಮಾಡಿದರೂ ಅತ್ಯಾಚಾರದಂತಹ ದುಷ್ಕøತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸಮಾಜ ತಲೆತಗ್ಗಿಸುವಂತ ವಿಷಯವಾಗಿದೆ ಎಂದರು.

ಇದರ ವಿರುದ್ಧ ಹೋರಾಟ ಮಾಡಲು ರಾಜಕೀಯ ನಾಯಕರ ಬದ್ಧತೆಯನ್ನು ಹಾಗೂ ಅವರ ಪ್ರತಿಜ್ಞೆಯನ್ನು ಪಡೆದಿದ್ದೇವೆ. ಈ ಅಭಿಯಾನವು ಕೈಲಾಶ್ ಸತ್ಯಾರ್ಥಿ ಮಕ್ಕಳ ಫೌಂಡೇಶನ್ ಮತ್ತು ಕರ್ನಾಟಕದಲ್ಲಿ ಸ್ಪಂದಾನದಿಂದ ನಡೆಯುತ್ತಿದೆ ಎಂದರು.

ಭಾರತವನ್ನು ಅತ್ಯಾಚಾರ ಮುಕ್ತ ದೇಶವಾಗಿ ಮಾರ್ಪಡಿಸಲು ಆಯವ್ಯಯ ಒಳಗೊಂಡ ರಾಷ್ಟ್ರೀಯ ಕ್ರಿಯಾ ಯೋಜನೆ, ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಶೇಕಡ 10ರಷ್ಟು ಮಕ್ಕಳ ಸಂರಕ್ಷಣೆಗೆ ಮೀಸಲಿಡಬೇಕು ಎಂಬಿತ್ಯಾದಿ ಬೇಡಿಕೆ ಇಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ