ಸೋತು, ಸೋತು ಸುಸ್ತಾಗಿದ್ದ ಡೆಲ್ಲಿಗೆ ಸಿಕ್ತು ಸಕ್ಸಸ್ ..! ತಂಡದ ಹಣೆಬರಹ ಬದಲಿಸಿದ್ರು ಯಂಗ್ ಪ್ಲೇಯರ್ಸ್

ಇದು ಯಾವುದೋ ಸಿನಿಮಾ ಕತೆಯಲ್ಲ ಇದು ಐಪಿಎಲ್ನ ಪ್ರಮುಖ ತಂಡ ಡೆಲ್ಲಿ ಫ್ರಾಂಚೈಸಿ ತಂಡದ ಕತೆ. ಬರೋಬ್ಬರಿ 11 ವರ್ಷಗಳ ತಪಸ್ಸು.. 11 ವರ್ಷಗಳ ನರಕಯಾತನೆ. ಪ್ರತಿ ಐಪಿಎಲ್ನಲ್ಲೂ ಗೆಲುವಿಗಾಗಿ ಡೆಲ್ಲಿ ಫ್ರಾಂಚೈಸಿ ಮಾಡಿದ ಪ್ರಯತ್ನ ಒಂದಾ ಎರಡಾ ? ಏನೇ ಪ್ರಯತ್ನ ಮಾಡಿದ್ರು ಸಕ್ಸಸ್ ಅನ್ನೋದು ದೂರದ ಮಾತಾಗಿತ್ತು. ಆದರೆ ಇಂದು ಡೆಲ್ಲಿ ಫ್ರಾಂಚೈಸಿಯ ಚರಿಷ್ಮಾ ಬದಲಾಗಿದೆ. ಈ ಬಾರಿಯ 12 ನೇ ಐಪಿಎಲ್ ಸೀಸನ್ನಲ್ಲಿ ಡೆಲ್ಲಿ ಬಲಿಷ್ಠ ತಂಡವಾಗಿ ಹೊರ ಹೊಮ್ಮಿದೆ.

ಪ್ರತಿ ಐಪಿಎಲ್ನಲ್ಲೂ ಸೋಲಿನ ದಂಡಯಾತ್ರೆ ಮಾಡಿದ ಡೆಲ್ಲಿ
ಕಲರ್ಫುಲ್ ಟೂರ್ನಿ ಐಪಿಎಲ್ ಆರಭವಾದಗಿನಿಂದ ಡೆಲ್ಲಿ ತಂಡ ಅಡುತ್ತಾ ಬಂದಿದೆ. ಈ ಹಿಂದಿನ ಹನ್ನೊಂದು ಸೀಸನ್ಗಳಲ್ಲಿ ಡೆಲ್ಲಿ ಬರೀ ಪಲ್ಟಿ ಹೊಡೆದಿದ್ದೆ ಅದ ರ ಸಾಧನೆ ಯಾಗಿದೆ. ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್, ಎಬಿ ಡಿವಿಲಿಯರ್ಸ್, ವಾರ್ನರ್, ಕೆವಿನ್ ಪೀಟರ್ಸನ್ರಂಥ ವಿಶ್ವ ಶ್ರೇಷ್ಠ ಆಟಗಾರರು ಡೆಲ್ಲಿ ತಂಡದಲ್ಲಿ ಆಡಿದ್ರು. ಡೆಲ್ಲಿಗೆ ಮಾತ್ರ ಸಕ್ಸಸ್ ಅನ್ನೋದು ಸಿಕ್ಕಿರಿಲ್ಲಿಲ್ಲ. ಆದರೆ ಪ್ರತಿ ಐಪಿಎಲ್ನಲ್ಲೂ ಸೋಲಿನ ಹಣೆಪಟ್ಟಿಯನ್ನ ಹೊತ್ತು ಟೂರ್ನಿಯಿಂದ ಬೇಗನೆ ನಿರ್ಗಮಿಸುತ್ತಿತ್ತು.
ಲಕ್ ತಂದುಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್..!
ಪ್ರತಿ ಐಪಿಎಲ್ನಲ್ಲೂ ಬರೀ ಸೋಲುಗಳನ್ನ ಕಂಡು ಕಂಗೆಟ್ಟಿದ್ದ ಡೆಲ್ಲಿ ತಂಡಕ್ಕೆ ಅದೃಷ್ಟ ತಂದುಕೊಟ್ಟಿದ್ದು ಡೆಲ್ಲಿ ಕ್ಯಾಪಿಟಲ್ಸ್. ಹೌದು ಡೆಲ್ಲಿ ಫ್ರಾಂಚೈಸಿ ಆರಂಭದ ಹತ್ತು ಸೀಸನ್ಗಳನ್ನ ಡೆಲ್ಲಿ ಡೇರ್ ಡೆವಿಲ್ಸ್ ಹೆಸರಿನಲ್ಲಿ ಆಡಿತ್ತು. ಡೆಲ್ಲಿ ಡೇರ್ ಡೆವಿಲ್ಸ್ ಹಸೆರಿನಲ್ಲಿ ಆಡುವಾಗ ಡೆಲ್ಲಿ ತಂಡ ಬರೀ ಸೋಲುಗಳನ್ನೆ ಕಂಡಿತ್ತು.ಕಳೆದ 11ನೇ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಂದು ಮರು ನಾಮಕರಣ ಮಾಡಲಾಯ್ತು. ಈ ಹಸರು ಡೆಲ್ಲಿ ತಂಡದ ಹಣೆಬರವನ್ನೆ ಬದಲಿಸಿತು. ಇದುವರೆಗೂ ಬರೀ ಸೋಲನ್ನೆ ಕಂಡಿದ್ದ ಡೆಲ್ಲಿಗೆ ಸಕ್ಸಸ್ ಕೊನೆಗೂ ಸಿಕ್ಕಿ ಬಿಡ್ತು. ಇದರ ಪರಿಣಾಮವೇ ಇಂದು ಎಲ್ಲರೂ ನಿಬ್ಬೆರಗಾಗುವಂತೆ ಸಾಧನೆ ಮಾಡಿರುವ ಡೆಲ್ಲಿ ತಂಡ ಇಂದು ಕ್ವಾಲಿಫೈರ್ಗೆ ಪ್ರವೇಶ ಪಡೆದಿದೆ.
ಯಂಗ್ ಟೀಮ್ ಕಟ್ಟಿ ಸೈ ಎನಿಸಿಕೊಂಡ ಡೆಲ್ಲಿ ಪ್ರಾಂಚೈಸಿ..!
11 ವರ್ಷಗಳ ಆ ಸೋಲು ಕಂಡಿದ್ದು ಸಾಕು ಎಂದು ಕಟ್ಟಿದ್ದ ಯಂಗ್ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವುದು ಅಷ್ಟು ಸಲಭದ ಮಾತಲ್ಲ.ಡೆಲ್ಲಿ ಫ್ರಾಂಚೈಸಿ ಅನುಭವಿಗಳನ್ನು ಪಕ್ಕಕ್ಕಿಟ್ಟು ಬಿಸಿ ರಕ್ತ, ಉತ್ಸಾಹಿ ತಂಡವನ್ನ ಕಟ್ಟಿದ್ದ ಫ್ರಾಂಚೈಸಿ ಆಟಗಾರರಿಗೆ ಹೊಸ ಚೈತನ್ಯ ಮೂಡಿಸಲು ತೀರ್ಮಾನಿಸಿತ್ತು. ಡೆಲ್ಲಿ ಫ್ರಾಂಚೈಸಿ ಹರಾಜಿನಲ್ಲಿ ಶ್ರೇಯಸ್ ಅಯ್ಯರ್, ಮರಿ ಸಚಿನ್ ಪೃಥ್ವಿ ಶಾ, ಮರಿ ಧೋನಿ ರಿಷಭ್ ಪಂತ್ರಂಥ ಟ್ಯಾಲೆಂಟ್ ಆಟಗಾರರನ್ನ ಒಟ್ಟುಗೂಡಿಸಿ ತಂಡಕ್ಕೆ ಆಯ್ಕೆ ಮಾಡಿಕೊಂಡಿತ್ತು.
ಇನ್ನೂ ಯಾರು ನಿರೀಕ್ಷೆ ಮಾಡದಂಥ ರೀತಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯಲ್ಲಿ ಮುನ್ನುಗ್ಗುತ್ತಿದೆ. ಪೃಥ್ವಿ ಶಾ, ರಿಷಭ್ ಪಂತ್, ಧವನ್, ರಬಡಾ, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಅಕ್ಷರ್ ಪಟೇಲ್, ಸಂದೀಪ್ ಲಮಿಚ್ಚಾನೆ ಸೇರಿ ಇತರೆ ದೇಸಿ ಆಟಗಾರರು ಇಂದು ಟೂರ್ನಿಯಲ್ಲಿ ಬಲಿಷ್ಠ ತಂಡಗಳಿಗೆ ಸೆಡ್ಡುಹೊಡೆದು ನಿಂತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಫ್ರಾಚೈಂಸಿ ಮಾಲೀಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ
ಡೆಲ್ಲಿ ಹುಡುಗರ ಸಕ್ಸಸ್ ಹಿಂದೆ ಪಾಟಿಂಗ್, ದಾದಾ
ಯುವ ಉತ್ಸಾಹಿ ತಂಡವನ್ನು ಕಟ್ಟಿದ್ದ ಫ್ರಾಂಚೈಸಿಗೆ ಮತ್ತೊಂದು ಉತ್ತಮ ಮಾರ್ಗದರ್ಶಕರನ್ನ ಆಯ್ಕೆ ಕರೆತರುವುದು ಸವಾಲಿನ ಕೆಲಸವಾಗಿತ್ತು. ಡೆಲ್ಲಿ ಫ್ರಾಂಚೈಸಿ ಇದ್ಯಾವೂದಕ್ಕೂ ರಾಜಿಯಾಗದೆ.. ದಿಗ್ಗಜ ಆಟಗಾರರನ್ನು ತಂಡಗಳ ಪ್ರಮುಖ ಹುದ್ದೆಗಳಿಗೆ ನೇಮಿಸಿತು. ರಿಕ್ಕಿ ಪಾಂಟಿಂಗ್, ಸೌರವ್ ಗಂಗೂಲಿ ಗರಡಿಯಲ್ಲಿ ಯುವ ಆಟಗಾರರು ಪಳಗಿದ್ದಾರೆ. ಕೋಚ್ ರಿಕ್ಕಿ ಪಾಂಟಿಂಗ್, ಸಲಹೆಗಾರ ಸೌರವ್ ಗಂಗೂಲಿ ಡೆಲ್ಲಿ ಆಟಗಾರರ ಮೇಲೆ ಹೆಚ್ಚು ಪರಿಣಾಮ ಬೀರಿದ್ದಾರೆ. ಇದಕ್ಕೆ ಸಾಕ್ಷಿ ಅಂಗಳದಲ್ಲಿ ಆಟಗಾರರು ತೋರೋ ಆಕ್ರಮಣಕಾರಿ ಆಟ. ಕಠಿಣ ಸಂದರ್ಭದಲ್ಲೂ ಯುವ ಆಟಗಾರರಿಗೆ ಹುರಿದುಂಬಿಸುವ ಪಾಂಟಿಂಗ್, ಗಂಗೂಲಿ ಆಟಗಾರರಿಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡ್ತಾರೆ. ದಿಗ್ಗಜಗರ ಸಲಹೆಗಳನ್ನು ಪಂದ್ಯದ ವೇಳೆ ಶ್ರೇಯಸ್ ಆಯ್ಯರ್ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಪಂದ್ಯವನ್ನು ಕೆಚೆಲ್ಲಿದ್ರು. ಮತ್ತೆ ಕಮ್ ಬ್ಯಾಕ್ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ