ಕನ್ನಡಕ್ಕೆ ಧಕ್ಕೆ ಬಂದರೆ ಸುಮ್ಮನಿರಲು ಸಾದ್ಯವಿಲ್ಲ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಮೇ 5- ಕನ್ನಡ ಭಾಷೆಗೆ ಧಕ್ಕೆಯಾದರೆ ಒಗ್ಗಟ್ಟಿನಿಂದ ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ತಿಳಿಸಿದರು.

ಸಾಯಿ ಕಲ್ಯಾಣ್ ಸುಪೀರಿಯಾ ಅಪಾರ್ಟ್‍ಮೆಂಟ್ಸ್ ಹೋಮ್ ವತಿಯಿಂದ ನೂತನವಾಗಿ ನಿರ್ಮಾಣ ಮಾಡುತ್ತಿರುವ ಪ್ರಾಜೆಕ್ಟ್ ಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆ ಮಾತನಾಡುವವರಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕು, ಹಾಗಂತ ಬೇರೆ ಭಾಷೆ ಕಲಿಯಬೇಡಿ ಎಂದು ಹೇಳುವುದಿಲ್ಲ. ಕನ್ನಡಕ್ಕೆ ಧಕ್ಕೆ ಬಂದರೆ ಸುಮ್ಮನಿರಲು ಸಾಧ್ಯವಿಲ್ಲ ಕನ್ನಡಿಗರೆಲ್ಲಾ ಒಗ್ಗಟ್ಟಾಗಬೇಕು ಎಂದು ಹೇಳಿದರು.

ಕನ್ನಡ ಭಾಷೆ ಮೇಲೆ ಇತರ ಭಾಷೆ ಹೇರಲು ಮುಂದಾದರೆ ಸಾರ್ವಜನಿಕರೊಂದಿಗೆ ನಾವು ಧ್ವನಿ ಗೂಡಿಸಿ ಕನ್ನಡ ಭಾಷೆ ಉಳಿವಿವಾಗಿ ಹೋರಾಡಲು ಸಿದ್ಧ.

ಕರ್ನಾಟಕದಲ್ಲಿ ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಕನ್ನಡಿಗರಿಗೆ ಹೆಚ್ಚು ಪ್ರಾತಿನಿಧ್ಯ ನೀಡಿ ಕೆಲಸ ನೀಡಬೇಕೆಂದು ಸಾರ್ವಜನಿಕರೊಂದಿಗೆ ನಮ್ಮ ಒತ್ತಾಯವೂ ಆಗಿದೆ ಎಂದು ಹೇಳಿದರು.

ಕಡಿಮೆ ಬೆಲೆಯಲ್ಲಿ ಮನೆಗಳ ನಿರ್ಮಾಣ ಮಾಡಿ ಜನರ ಬಂಡವಾಳಕ್ಕೆ ಅನುಗುಣವಾಗಿ ಗುಣಮಟ್ಟದ ಮನೆಗಳನ್ನು ಸಾಯಿ ಕಲ್ಯಾಣ ಸುಪೀರಿಯಾ ಅಪಾರ್ಟ್‍ಮೆಂಟ್‍ನವರು ನಿರ್ಮಿಸಲಿದ್ದಾರೆ. 200ಕ್ಕೂ ಹೆಚ್ಚು ಮನೆಗಳನ್ನು ಇಲ್ಲಿ ನಿರ್ಮಿಸುತ್ತಿದ್ದು, ಇನ್ನೂ ಸಾಕಷ್ಟು ಬೇಡಿಕೆ ಇದೆ. ಫಾಸ್ಟ್ ಟ್ರಾಕ್ ಯೂಸ್ ಮಾಡಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಉತ್ತಮವಾಗಿ ಮನೆಗಳು ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಚಿವ ಕೃಷ್ಣಭೆರೇಗೌಡ, ಸಾಯಿ ಕಲ್ಯಾಣ ಬಿಲ್ಡರ್ಸ್ ಅಂಡ್ ಡೆವಲಪರ್ಸ್‍ನ ಅಧ್ಯಕ್ಷ ವೇಣುಗೋಪಾಲ್, ವ್ಯವಸ್ಥಾಪಕ ನಿರ್ದೇಶಕ ಸುನೀಲ್, ಪಾಲಿಕೆ ಸದಸ್ಯರಾದ ಶ್ರೀಕಾಂತ್, ಜಯಪ್ರಕಾಶ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ