ಬಿಸಿಸಿಐಗೆ ಪಾಲಿಗೆ ಮುಳುವಾಯಿತು ಐಪಿಎಲ್ : ವಿಶ್ವಕಪ್ನಲ್ಲಿ ಟೀಂ ಇಂಡಿಯಾಕ್ಕೆ ಕಾದಿದೆ ಅಪಾಯ..!

ಕಲರ್ಫುಲ್ ಟೂರ್ನಿ ಐಪಿಎಲ್ ಸೀಸನ್ 12 ಮುಗಿಯುತ್ತಾ ಬಂದಿದೆ. ಈ ಬಿಲಿಯನ್ ಡಾಲರ್ ಟೂರ್ನಿ ಮುಗಿಯುತ್ತಿದ್ದಂತೆ ಇಡೀ ವಿಶ್ವವೇ ಕಾದು ಕುಳಿತಿರುವ ವಿಶ್ವಕಪ್ ಆರಂಭವಾಗಲಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ವಿಶ್ವಕಪ್ ಮೆಗಾ ಟೂರ್ನಿ, ಕಿಕ್ ಸ್ಟಾರ್ಟ್ ಆಗಲಿದೆ. ವಿಶ್ವಕಪ್ಗೆ ಕೆಲವೇ ದಿನಗಳು ಬಾಕಿ ಇರುವಂತೆ, ಬಿಸಿಸಿಐ ಮತ್ತು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಹೊಸ ತಲೆ ನೋವೋಂದು ಶುರುವಾಗಿದೆ.

ಬಿಸಿಸಿಐ ಬಿಗ್ ಬಾಸ್ಗಳಿಗೆ ಈಗ ತಲೆ ನೋವು ಶುರುವಾಗಲು ಕಾಣವಾಗಿರೊದು ತಾನೆ ನಡೆಸುತ್ತಿರುವ ಐಪಿಎಲ್. ಯುವ ಆಟಗಾರರಿಗೆ ಅವಕಾಶ ಕೊಡುವ ಸಲುವಾಗಿ ತಾನೆ ಆರಂಭಿಸಿದ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಈ ಬಾರಿ ಬಿಸಿಸಿಐಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬಿಸಿಸಿಐಗೆ ತಲೆ ನೋವಾದ ವಿದೇಶಿ ಕೋಚ್ಗಳು
ಬಹುತೇಕ ಕ್ರಿಕೆಟಿಗರ ಐಪಿಎಲ್ನಲ್ಲಿ ಕೋಚ್, ಸಹಾಯಕ ಕೋಚ್ಗಳಾಗಿ ಇದರಲ್ಲಿ ವಿದೇಶಿಯರು ಮತ್ತು ಅನಲಿಸ್ಟ್ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಬಿಸಿಸಿಐಗೆ ಸಮಸ್ಯೆಯಾಗಿದೆ. ವಿದೇಶಿ ಕೋಚ್ಗಳು ಐಪಿಎಲ್ ಫ್ರಾಂಚೈಸಿಗಳ ಜೊತೆ ಕೆಲಸ ಮಾಡುತ್ತಿರುವುದರಿಂದ, ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ವೀಕ್ನೆಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್, ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡದ ಜೊತೆ ಕಾರ್ಯ ನಿರ್ವಹಿಸಲಿದ್ದಾರೆ.

ಬನ್ನಿ ಹಾಗಾದ್ರೆ ವಿದೇಶಿ ಕೋಚ್ಗಳಿಂದ ಮುಂಬರುವ ವಿಶ್ವಕಪ್ನಲ್ಲಿ ಟೀಂ ಇಂಡಿಯಾಕ್ಕೆ ಹೇಗೆಲ್ಲಾ ಗಂಡಾಂತರ ಕಾದಿದೆ ಅನ್ನೋದನ್ನ ತೋರಿಸ್ತೀವಿ ನೋಡಿ.

ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದಲ್ಲದೇ ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ ತಂಡಕ್ಕೆ ಸಹಾಯಕ ಕೋಚ್ ಆಗಿದ್ದಾರೆ. ವಿಶ್ವಕಪ್ನಲ್ಲಿ ಆಡಲಿರುವ ಓಪನರ್ ಶಿಖರ್ ಧವನ್ ಬಗ್ಗೆ ರಿಕಿ ಪಾಟಿಂಗ್ Strength ಮತ್ತು Weakness ಬಗ್ಗೆ ಆಸಿಸ್ ತಂಡಕ್ಕೆ ಮಾಹಿತಿ ಕೊಡಲಿದ್ದಾರೆ.

ಇನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಶ್ರೀಲಂಕಾ ತಂಡದ ಮಾಜಿ ಕೋಚ್ ಮಹೇಲಾ ಜಯವರ್ಧನೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಶ್ರೀಲಂಕಾದ ತಂಡಕ್ಕೆ ಸಲಹೆಗಾರರಾಗಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಇವರ ಆಟದ ಮಹೇಲಾ ಜಯವರ್ಧನೆ ಸರಿಯಾಗಿ ತಿಳಿದುಕೊಂಡಿದ್ದರಿಂದ ವಿಶ್ವಕಪ್ ತಮ್ಮ ತಂಡಕ್ಕೆ ರಾಷ್ಟ್ರೀಯ ತಂಡಕ್ಕೆ ಸಹಾಯ ಮಾಡಲಿದ್ದಾರೆ.

ಇವರು ಚೆನ್ನೈ ಮೂಲದ ಪ್ರಸನ್ನ ಅಗೊರಮ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವೀಡಿಯೊ ಅನಲಿಸ್ಟ್ ಆಗಿದ್ದಾರೆ. ಇವರು ದಕ್ಷಿಣ ಆಫ್ರಿಕಾದ ತಂಡದ ವೀಡಿಯೊ ಅನಲಿಸ್ಟ್ ಕೂಡ ಹೌದು. ತಂಡದ ಕೆ.ಎಲ್.ರಾಹುಲ್ ಮತ್ತು ಮೊಹಮ್ಮದ್ ಶಮಿ, ವಿಶ್ವಕಪ್ನಲ್ಲಿ ಭಾರತ ತಂಡವನ್ನ ಪ್ರತಿನಿಧಿಸುತ್ತಿದ್ದಾರೆ. ಇವರ ಗೇಮ್ನ್ನ ಚೆನ್ನಾಗಿ ನೋಡಿದ್ದರಿಂದ ವಿಶ್ವಕಪ್ನಲ್ಲಿ ತಾವು ಪ್ರತಿನಿಧಿಸಲಿರುವ ತಂಡಕ್ಕೆ ಸಹಾಯ ಮಾಡಲಿದ್ದಾರೆ.

ಒಟ್ಟಿನಲ್ಲಿ ವಿಶ್ವಕಪ್ನಲ್ಲಿ ಟೀಂ ಇಂಡಿಯಾಕ್ಕೆ ಗಂಡಾಂತರ ಬಂದಿದ್ದು ಆಟಗಾರರು ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ವಿಶ್ವಯುದ್ದವನ್ನ ಗೆಲ್ಲಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ