ಪೊಲೀಸರಿಂದ ನಾಲ್ವರು ದರೋಡೆಕೋರರ ಬಂಧನ

ಕುಣಿಗಲ್, ಏ.30- ರಸ್ತೆಯಲ್ಲಿ ದರೋಡೆ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ನಾಲ್ವರನ್ನು ಹುಲಿಯೂರು ದುರ್ಗಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಆಲಿಖಾನ್, ರಚನಾ, ಕೃತಿಕಾ, ರವಿಕುಮಾರ್ ಬಂಧಿತ ಆರೋಪಿಗಳು.

ಏ.8ರಂದು ಅಂಚೆಪಾಳ್ಯದ ವಿನ್ನರ್‍ಬರ್ಗರ್ ಕಾರ್ಖಾನೆಯ ಲಾರಿಯೊಂದು ಮಧ್ಯರಾತ್ರಿ ಮಂಡ್ಯದಿಂದ ಬರುತ್ತಿದ್ದಾಗ ಹುಲಿಯೂರುದುರ್ಗ ಬೈಪಾಸ್ ರಸ್ತೆಯಲ್ಲಿ ಆರೋಪಿಗಳು ಅಡ್ಡಗಟ್ಟುದ್ದಾರೆ.

ಲಾರಿಯ ಚಾಲಕ ಸಮೀರ್‍ನನ್ನು ಥಳಿಸಿ ಆತನ ಬಳಿ ಇದ್ದ 2500 ರೂ.ನಗದು ಹಾಗೂ ಮೊಬೈಲ್ ಕಿತ್ತು ಪರಾರಿಯಾಗಿದ್ದರು.

ಈ ಸಂಬಂಧ ಸಮೀರ್ ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ನೇತೃತ್ವದಲ್ಲಿ ಡಿವೈಎಸ್‍ಪಿ ರಾಮಲಿಂಗೇಗೌಡ, ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ