ದಾರಿ ತಪ್ಪಿದ ಮಕ್ಕಳನ್ನು ತಿದ್ದಬಹುದು; ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ತಿದ್ದಬಾರದು: ರಮ್ಯಾ ಟ್ವೀಟ್ ಗೆ ನಟ ಜಗ್ಗೇಶ್ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ಮಾಜಿ ಸಂಸದೆ, ನಟಿ ರಮ್ಯಾ ಟ್ವೀಟ್ ಗೆ ನಟ ಬುಲೆಟ್ ಪ್ರಕಾಶ್ ಕಿಡಿಕಾರಿದ ಬೆನ್ನಲ್ಲೇ ಈಗ ಹಿರಿಯ ನಟ ಜಗ್ಗೇಶ್​ ಕೂಡ ಕಿಡಿಕಾರಿದ್ದು, ತಮ್ಮದೇ ಶೈಲಿಯಲ್ಲಿ ರಮ್ಯಾಗೆ ತಿರುಗೇಟು ನೀಡಿದ್ದಾರೆ.

ಸಹೋದರ, ದಾರಿ ತಪ್ಪಿದ ಮಕ್ಕಳನ್ನು ತಿದ್ದಬಹುದು. ಆದರೆ ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ತಿದ್ದಬಾರದು. ಹೀಗೆ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸವೇ ಯಕ್ಷಪ್ರಶ್ನೆ. ಜನನವು ಹೇಗೋ ಹಾಗೇ ಜೀವನ. ಅಂಥ ಮಕ್ಕಳ ಬಗ್ಗೆ ಅನುಕಂಪ ವಹಿಸಬೇಕು. ಅಂಥವರೆಲ್ಲ ಮಾನಸಿಕ ವಿಕಲಚೇತನರು. ಇಂತಹವರನ್ನು ನೋಡಿ ಕೂಡ ಸಂತೋಷ ಪಡುವ ಜನರು ಇರುವುದು ದೌರ್ಭಾಗ್ಯ ಎಂದು ವ್ಯಂಗ್ಯಭರಿತವಾಗಿ ಟ್ವೀಟ್​ ಮಾಡಿದ್ದಾರೆ.

Actor jaggesh,ramya tweet,bullet prakash

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ