ಆಪರೇಷನ್ ಕಮಲಕ್ಕೂ ನನಗೂ ಸಂಬಂಧವಿಲ್ಲ-ಶಾಸಕ ಮಹೇಶ್ ಕಮಟಳ್ಳಿ

ಅಥಣಿ,ಏ.29- ನನಗೆ ಯಾವ ವಿದೇಶಿ ಪ್ರವಾಸದ ವಿಚಾರವೂ ಗೊತ್ತಿಲ್ಲ. ಆಪರೇಷನ್ ಕಮಲದ ವಿಚಾರವೂ ತಿಳಿದಿಲ್ಲ ಎಂದು ಶಾಸಕ ಮಹೇಶ್ ಕಮಟಳ್ಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿಯ ಟೂರ್, ಯಾವ ವಿದೇಶಿ ಪ್ರವಾಸ. ಸದ್ಯ ನಮ್ಮ ಕ್ಷೇತ್ರಕ್ಕೆ ನೀರು ತಂದರೆ ಸಾಕಾಗಿದೆ. ನಮಗೆ ಈ ಬಗ್ಗೆ ತಲೆ ಕೆಟ್ಟು ಹೋಗಿದೆ. ಕೃಷ್ಣಾ ನದಿ ನೀರು ತರುವ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾನು ವಿದೇಶಿ ಪ್ರವಾಸ ಕೈಗೊಳ್ಳಲು ನನ್ನ ಬಳಿ ಪಾಸ್‍ಪೋರ್ಟ್ ಇಲ್ಲ ಎಂದು ಹೇಳಿದರು. ರಮೇಶ್ ಜಾರಕಿಹೊಳಿಯವರೊಂದಿಗೆ ನಮ್ಮ ಕ್ಷೇತ್ರಕ್ಕೆ ನೀರು ತರುವ ವಿಚಾರ ಮಾತ್ರ ಮಾತನಾಡಿದ್ದೇನೆ. ಟೂರ್ ಹೋಗುವ ಸಂಬಂಧ ಮಾತುಕತೆ ನಡೆಸಿಲ್ಲ. ಆಪರೇಷನ್ ಕಮಲಕ್ಕೂ ನನಗೂ ಯಾವ ಸಂಬಂಧ ಇಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ