ಕುಂದಗೋಳ ಕಾಂಗ್ರೇಸ್‍ನಲ್ಲಿ ಬಿನ್ನಮತ

ಹುಬ್ಬಳ್ಳಿ,ಏ.29- ಕುಂದಗೋಳ ಕಾಂಗ್ರೆಸ್‍ನಲ್ಲಿ ಭಿನ್ನಮತ ತಲೆದೋರಿದೆ. ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಇಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಶಿವಾನಂದ ಬೆಂತೂರ್ ನಾಮಪತ್ರ ಸಲ್ಲಿಸಿದ್ದಾರೆ.

ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಅವರು ತಮ್ಮ ಉಮೇದುವಾರಿಕೆ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕುಂದಗೋಳ ಬಿಜೆಪಿಯಲ್ಲಿ ಚಿಕ್ಕನಗೌಡ್ರ ಟಿಕೆಟ್ ನೀಡಿದ್ದರಿಂದ ಭಿನ್ನಮತ ತಲೆ ದೋರಿತ್ತು. ಅದನ್ನು ಹೈಕಮಾಂಡ್ ವರಿಷ್ಠರು ಶಮನಗೊಳಿಸಿದ್ದರು. ಈಗ ಕಾಂಗ್ರೆಸ್‍ನಲ್ಲಿ ಕೊನೆ ಕ್ಷಣದಲ್ಲಿ ಬಂಡಾಯ ಉಂಟಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ