ನಾನು ಏನು ಎಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ; ಹಣ ಡೀಲ್​ ಆಡಿಯೋ ವೈರಲ್​​ ವಿಚಾರ, ಮುದ್ದಹನುಮೇಗೌಡ ಸ್ಪಷ್ಟನೆ

ತುಮಕೂರು: ದೇವೇಗೌಡರ ವಿರುದ್ಧ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ಸು ಪಡೆಯಲು ಮುದ್ದ ಹನುಮೇಗೌಡ ಹಾಗೂ ಕೆ.ಎನ್​ ರಾಜಣ್ಣ ತಲಾ 3.5 ಕೋಟಿ ಹಣ ಪಡೆದಿದ್ದಾರೆ ಎಂಬ ಆಡಿಯೋ ವೈರಲ್​ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ.

ಆದರೆ ಈ ಕುರಿತು ಸ್ಪಷ್ಟಪಡಿಸಿರುವ  ಮುದ್ದ ಹನುಮೇಗೌಡ, ನಾವು ಪ್ರಾಮಾಣಿಕವಾಗಿದ್ದೇವೆ. ಕೆಲಸಕ್ಕೆ ಬರದವನು ಮಾತಾಡಿದ್ದಾನೆ. ಮಾತಾಡಿದ್ದಕ್ಕೆಲ್ಲಾ ಕಂಪ್ಲೆಂಟ್ ಕೊಡೋಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ.

ನಾನು ಏನು ಎಂದು ಜಿಲ್ಲೆಯ ಜನರಿಗೆ ಗೊತ್ತು. ಮುದ್ದಹನುಮೇಗೌಡ ಆ ಥರನಾ ಅಂತಾ ಕೇಳಿ. ನಾನು ನಿಷ್ಕಳಂಕವಾಗಿ ಬದುಕುತ್ತಿದ್ದೇನೆ ಎಂದಿದ್ದಾರೆ.

ನಾನು ಮಾತಾಡಿದ್ದು ನಿಜ:
ಇನ್ನು ಈ ಆಡಿಯೋ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಆಪ್ತ ದರ್ಶನ್, ನಾನು ಮಾತಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದು,  ಆದರೆ ಆಡಿಯೋದಲ್ಲಿ ಇರೋದೆಲ್ಲಾ ನಿಜವಲ್ಲ. ಮಾತಾಡಿದ್ದೆಲ್ಲಾ ನಿಜ ಆಗಿರಲ್ಲ, ಸುಮ್ನೆ ಮಾತಾಡಿದ್ದೇವೆ. ಆಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದಿದ್ದಾರೆ.

ನಾಮಪತ್ರ ಹಿಂದೆ ಪಡೆದಿದ್ದ ನಾಯಕರು:

ಕಾಂಗ್ರೆಸ್​ ಟಿಕೆಟ್​ ನೀಡಿಲ್ಲ ಎಂದು ಪಕ್ಷದ ನಾಯಕರ ಮಾತನ್ನು ಧಿಕ್ಕರಿಸಿ, ಮುದ್ದ ಹನುಮೇಗೌಡ ಹಾಗೂ ಕೆ.ಎನ್​ ರಾಜಣ್ಣ ನಾಮಪತ್ರ ಸಲ್ಲಿಸಿದ್ದರು. ಆದರೆ, ಕೊನೆಘಳಿಗೆಯಲ್ಲಿ ಪಟ್ಟು ಸಡಿಲಿಸಿದ ಮುದ್ದಹನುಮೇಗೌಡ ನಾಮಪತ್ರ ಹಿಂದೆ ಪಡೆದಿದ್ದರು. ಈ ರೀತಿ ನಾಮಪತ್ರ ವಾಪಸ್ಸು ಪಡೆಯಲು ಕಾರಣ ಕೋಟಿ ಕೋಟಿ ಹಣ ಎಂಬ ಮಾತು ಕೇಳಿ ಬಂದಿದೆ. ಅಲ್ಲದೇ ಮುದ್ದಹನುಮೇಗೌಡ ಅವರಿಗೆ ಹಣ ನೀಡಿ ಡೀಲ್​ ನಡೆಸಿರುವ ಬಗ್ಗೆ ಡಿಸಿಎಂ ಪರಮೇಶ್ವರ್​ ಬೆಂಬಲಿಗ ಮಾತನಾಡಿರುವ ಆಡಿಯೋ ಕೂಡ ವೈರಲ್​ ಆಗಿದೆ.

ಆಡಿಯೋದಲ್ಲಿ ಇಬ್ಬರಿಗೂ ತಲಾ 3.5 ಕೋಟಿ ಹಣ ನೀಡುವುದಾಗಿ  ಡಿಸಿಎಂ ಪರಮೇಶ್ವರ್​ ಬೆಂಬಲಿಗ ದರ್ಶನ್, ಇಬ್ಬರು ನಾಯಕರ ಸಂಧಾನ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ