ಅಮೆರಿಕಾದಿಂದ ಬಂದು ಮತ ಚಲಾಯಿಸಿದ ಸಾಪ್ಟ್‍ವೇರ್ ಉದ್ಯೋಗಿ

ಕೊಪ್ಪಳ, ಏ.23-ಕಡ್ಡಾಯ ಮತದಾನ ಮಾಡುವಂತೆ ಸರ್ಕಾರಗಳು, ಸಂಘ-ಸಂಸ್ಥೆಗಳು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಸಹ ಕೆಲವರು ತಮ್ಮ ಹಕ್ಕುಗಳನ್ನು ಚಲಾಯಿಸಲು ನಿರಾಸಕ್ತಿ ತೋರುವವರಿಗೆ ಮಾದರಿ ಎಂಬಂತೆ ವ್ಯಕ್ತಿಯೊಬ್ಬ ಸಾವಿರಾರು ಕಿಲೋಮಿಟರ್ ದೂರದ ದೇಶ ಅಮೆರಿಕಾದಿಂದ ಬಂತು ತನ್ನ ಹಕ್ಕನ್ನು ಚಲಾಯಿಸಿದ್ದಾರೆ.

ಅಮೆರಿಕದಲ್ಲಿ ಸಾಫ್ಟ್‍ವೇರ್ ಉದ್ಯೋಗಿಯಾಗಿರುವ ಅಭಿಷೇಕ್ ಪಾಟೀಲ್ ಎಂಬ ವ್ಯಕ್ತಿ ತನ್ನ ಹಕ್ಕು ಚಲಾಯಿಸಲೇಬೇಕೆಂದು ತಾಯ್ನಾಡಿಗೆ ಬಂದು ಮತ ಚಲಾಯಿಸಿದ್ದಾರೆ.

ಕಾರಟಗಿ ತಾಲೂಕಿನ ಯರಡೋಣ ಗ್ರಾಮದ ಮತಗಟ್ಟೆ ಸಂಖ್ಯೆ 138ರಲ್ಲಿ ಮತದಾನ ಮಾಡುವ ಮೂಲಕ ನನ್ನ ಕರ್ತವ್ಯ ನಾನು ನಿರ್ವಹಿಸಿದ್ದೇನೆ. ಎಲ್ಲರೂ ತಪ್ಪದೇ ನಿಮ್ಮ ಕರ್ತವ್ಯ ನಿರ್ವಹಿಸಿ. ತಪ್ಪದೇ ಮತದಾನ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ