ಕಾಂಗ್ರೇಸ್‍ಗೆ ರಮೇಶ್ ಜಾರಕಿಹೊಳಿ ಅನಿವಾರ್ಯವಲ್ಲ-ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ, ಏ.23-ರಮೇಶ್ ಜಾರಕಿಹೊಳಿಯವರು ಬಿಜೆಪಿಗೆ ಹೋಗುವುದಾದರೆ ಹೋಗಿ ಬಿಡಲಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ರಮೇಶ್ ಬಿಜೆಪಿಗೆ ಹೋಗುವುದಾಗಿ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ರಮೇಶ್ ಜಾರಕಿ ಹೊಳಿ ಅನಿವಾರ್ಯವಲ್ಲ, ಬೇರೆಯವರೂ ಅನಿವಾರ್ಯವಲ್ಲ ಎಂಬುದನ್ನು ಮೊದಲು ಅವರು ಅರಿಯಲಿ ಎಂದರು.

ಪದೇ ಪದೇ ರಾಜೀನಾಮೆ, ರಾಜೀನಾಮೆ ಎಂದು ಹೇಳುತ್ತಲೇ ಇದ್ದಾರೆ ಅವರು ರಾಜೀನಾಮೆ ಕೊಡುವುದಾದರೆ ಕೊಡಲಿ ಬಿಡಿ. ಅವರು ಬಿಜೆಪಿಗೆ ಹೋದ ನಂತರ ನಾನು ಮಾತನಾಡುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ