ಹಜ್ ಯಾತ್ರಿಕರ ಪ್ರಮಾಣದಲ್ಲಿ ಹೆಚ್ಚಳ-ಸೌದಿ ಸರ್ಕಾರದಿಂದ ಭಾರತಕ್ಕೆ ಕೊಡುಗೆ

ರಿಯಾದ್,ಏ.20-ಪ್ರಧಾನಿ ನರೇಂದ್ರ ಮೋದಿಯವರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದಾಗ ಭಾರತದ ಹಜ್ ಯಾತ್ರಿಕರ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಸಮ್ಮತಿಸಿದ ಸೌದಿ ದೊರೆಗಳು ಇತ್ತೀಚೆಗೆ ಭಾರತಕ್ಕೆ ಬಂದಾಗ ಒಪ್ಪಿಗೆ ಸೂಚಿಸಿದ್ದರು.

ಅದರಂತೆ ನೆನ್ನೆ ಆದೇಶ ಹೊರಡಿಸಿದ ಸೌದಿ ಸರ್ಕಾರ ಭಾರತದಲ್ಲಿ ಮುಸ್ಲೀಂರ ಸಂಖ್ಯೆ ಹೆಚ್ಚಾಗಿರುವ ಪ್ರದೇಶಕ್ಕೆ ಅನುಗುಣವಾಗಿ ಹಜ್ ಯಾತ್ರಿಕರ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಅಲ್ಲದೇ ಎರಡು ಲಕ್ಷ ಪ್ರಯಾಣಿಕರ ವರಗಿನ ಪ್ರಯಾಣಿಕರ ಸಂಖ್ಯೆಯನ್ನು ಕಾಯ್ದಿರುಸುವ ಪಟ್ಟಿಯಿಂದ ತಕ್ಷಣ ತೆರವುಗೊಳಿಸಿ ಯಾತ್ರೆ ಮುಂದುವರೆಸಲು ಸೌದಿ ಸರ್ಕಾರ ಅನವು ಮಾಡಿಕೊಟ್ಟಿದೆ.

ತಮ್ಮ ಮನವಿ ಪುರಸ್ಕರಿಸಿದ ಸೌದಿ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ