ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ: ಬೆಳಿಗ್ಗೆ 11ಗಂಟೆವರೆಗೆ ಶೇ. 19.27ರಷ್ಟು ಮತದಾನ

ಬೆಂಗಳೂರು: ಕರ್ನಾಟಕ 14 ಕ್ಷೇತ್ರಗಳಲ್ಲಿ ಮತದಾನ ಬರದಿಂದ ಸಾಗಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ಒಟ್ಟು 19.27% ಮತದಾನ ನಡೆದಿದೆ. ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಪ್ರಮಾಣದ 32.10% ಮತದಾನ ನಡೆದಿದ್ದರೆ ಬೆಂಗಳೂರು ಗ್ರಾಮೀಣದಲ್ಲಿ ಅತಿ ಕಡಿಮೆ 13.52% ಮತದಾನ ನಡೆದಿದೆ.

11 ಗಂಟೆ ವರೆಗಿನ ಶೇಕದಾವಾರು ಮತದಾನ ವಿವರ:

* ಉಡುಪಿ ಚಿಕ್ಕಮಗಳೂರು – 28.96%
* ಹಾಸನ – 23.31%
* ದಕ್ಷಿಣ ಕನ್ನಡ – 32.10%
* ಚಿತ್ರದುರ್ಗ – 16.75%
* ತುಮಕೂರು – 22.52%
* ಮಂಡ್ಯ – 17.00%
* ಮೈಸೂರು – 19.97%
* ಚಾಮರಾಜನಗರ – 19.21%
* ಬೆಂಗಳೂರು ಗ್ರಾಮಾಂತರ – 13.52%
* ಬೆಂಗಳೂರು ಉತ್ತರ – 13.62%
* ಬೆಂಗಳೂರು ಕೇಂದ್ರ – 15.47%
* ಬೆಂಗಳೂರು ದಕ್ಷಿಣ – 18.55%
* ಚಿಕ್ಕಬಳ್ಳಾಪುರ – 17.57%
* ಕೋಲಾರ – 20.22%

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ