ಬಿಜೆಪಿ ಮುಖಂಡರ ತಪಾಸಣೆ ವೇಳೆ 80 ಲಕ್ಷ ಹಣ ಪತ್ತೆ

ಕಾರವಾರ, ಏ.17-ನಿನ್ನೆ ಬಿಜೆಪಿಯ ಮುಖಂಡರ ತಪಾಸಣೆ ವೇಳೆ 80 ಲಕ್ಷ ಹಣ ಪತ್ತೆಯಾಗಿದೆ ಎಂದು ಚುನಾವಣೆ ಜಿಲ್ಲಾ ನೋಡಲ್ ಅಧಿಕಾರಿ ಎಂ.ರೋಷನ್ ಮಾಹಿತಿ ನೀಡಿದ್ದಾರೆ.

ನಿನ್ನೆ ಶಿರಸಿ ನಗರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಆ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜಿ.ನಾಯ್ಕ, ಜಿಲ್ಲಾ ಕಾರ್ಯದರ್ಶಿ ಕೃಷ್ಣ ಎಸಳೆ, ಶಿರಸಿ ಗ್ರಾಮೀಣ ಬಿಜೆಪಿ ಅಧ್ಯಕ್ಷ ರಮಾಕಾಂತ್ ಹೆಗ್ಡೆ ಅವರ ಕಾರುಗಳನ್ನು ತಪಾಸಣೆ ಮಾಡಲಾಗಿತ್ತು.

ಈ ವೇಳೆ ಒಟ್ಟು 80.20 ಲಕ್ಷ ನಗದು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲಿ ರಮಾಕಾಂತ್ ಹೆಗ್ಡೆ ಅವರ ಬಳಿ 70 ಲಕ್ಷ, ಕೃಷ್ಣ ಎಸಳೆ ಕಾರಿನಲ್ಲಿ 9.20 ಲಕ್ಷ ಹಣ ಪತ್ತೆಯಾಗಿತ್ತು ಎಂದು ರೋಷನ್ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ