ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿನಲ್ಲೇ ಮಹಾತ್ಮರೆನಿಸಿಕೊಂಡಿದ್ದಾರೆ-ಡಾ.ನಟರಾಜ್ ಹುಳಿಯಾರ್

ಬೆಂಗಳೂರು,ಏ.14- ಡಾ. ಬಿ.ಆರ್.ಅಂಬೇಡ್ಕರ್ ಇಡೀ ಜಗತ್ತಿನಲ್ಲೇ ಮಹಾತ್ಮರೆನಿಸಿಕೊಂಡಿದ್ದಾರೆ.ಇವರು ದೀನದಲಿತರ, ಉದ್ದಾರಕರೂ ಮಾತ್ರವಲ್ಲದೆ ನೊಂದವರು, ಮಹಿಳೆಯರು, ಅಸಹಾಯಕರು ಹಾಗೂ ಎಲ್ಲ ಜನಾಂಗಗದವರಿಗೂ ಆಶಾದೀಪವೆನಿಸಿದ್ದಾರೆ ಎಂದು ಡಾ.ನಟರಾಜ್ ಹುಳಿಯಾರ್ ತಿಳಿಸಿದರು.

ನಗರದ ಸೈಂಟ್‍ಕ್ಲಾರೆಟ್ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ಅಂಬೇಡ್ಕರ್ ಅವರ 128ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವೂ ಇಡೀ ಜಗತ್ತಿನ ಎಲ್ಲ ಸಂವಿಧಾನಗಳಿಗಿಂತ ವಿಶೇಷವಾದ ಸಂವಿಧಾನವನ್ನು ನೀಡಿರುತ್ತಾರೆ.ಆದರೆ ಇವತ್ತಿನ ರಾಜಕಾರಣದ ಸಂದರ್ಭದಲ್ಲಿ ಅಂಬೇಡ್ಕರನ್ನು ಕೇವಲ ಒಂದೇ ಜಾತಿ ಕೋಮಿಗೆ ಸೇರಿಸುತ್ತಿರುವುದು ನಿಜಕ್ಕೂ ನೋವುಂಟಾಗುವ ಸಂಗತಿಯೆನಿಸಿದೆ ಎಂದರು.

ಅಂಬೇಡ್ಕರವರೂ ಎಂದೆಂದಿಗೂ ಎಲ್ಲರಿಗೂ, ಎಲ್ಲಾ ಕಾಲಕ್ಕೂ ಅರ್ಥವಾಗುವಂತಹ ವ್ಯಕ್ತಿಯಾಗಿದ್ದಾರೆ.ಆದ್ದರಿಂದ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಬದುಕು ಮತ್ತು ಬರಹಗಳನ್ನು ಅಧ್ಯಯನ ಮಾಡಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಉನ್ನತ ಆದರ್ಶ, ಚಿಂತನೆಗಳನ್ನು ರೂಢಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕಂಕಣ ಬದ್ಧರಾಗಬೇಕೆಂದು ಯುವ ಸಮೂಹಕ್ಕೆ ಕರೆ ನೀಡಿದ್ದರು.

ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಡಾ.ನಟರಾಜ್ ಹುಳಿಯಾರ್ ಅವರನ್ನು ಪ್ರಾಂಶುಪಾಲರು ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ಡಾ. ಸಾಬುಜಾರ್ಜು, ಸುರೇಶ್ .ಎನ್., ಸಂಯೋಜನಾಧಿಕಾರಿಗಳಾದ ಮಾದೇಶ್. ಎನ್., ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿಗಳು ಸೇರಿದಂತೆ ಇತರರು ಉತಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ