ಶಿಡ್ಲಘಟ್ಟ, ಏ.10- ಕಾಂಗ್ರೆಸ್ ಸಂಧಾನ ಸಭೆಯಲ್ಲಿ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಸ್ಥಳೀಯ ಶಾಸಕರು ಹಾಗೂ ಬೆಂಬಲಿಗರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಇಂದು ಶಾಸಕ ವಿ.ಮುನಿಯಪ್ಪ, ಸಂಸದ ಕೆ.ಎಚ್.ಮುನಿಯಪ್ಪ ನಡುವಿನ ಸಂಧಾನ ಸಭೆಯಲ್ಲಿ ವಿ.ಮುನಿಯಪ್ಪ ಬೆಂಬಲಿಗರು ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಬಲಿಗರ ನಡುವೆ ಉಂಟಾಗಿದ್ದ ಗೊಂದಲ ಹಾಗೂ ವಿ.ಮುನಿಯಪ್ಪ ಮತ್ತು ಕೆ.ಎಚ್.ಮುನಿಯಪ್ಪ ನಡುವೆ ಉಂಟಾಗಿದ್ದ ವೈಮನಸ್ಯ ಸರಿಪಡಿಸಿ ಸಂಧಾನ ಮಾಡಲು ಡಿ.ಕೆ.ಶಿವಕುಮಾರ್ ಸಭೆ ಕರೆದಿದ್ದರು.
ಕೆ.ಎಚ್.ಮುನಿಯಪ್ಪ ಸಮ್ಮುಖದಲ್ಲೇ ವಿ.ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ನ ಸಂಸದರಿದ್ದರೂ ಅನುದಾನ ಬರಲಿಲ್ಲ. ಕಾಂಗ್ರೆಸ್ಅನ್ನೇ ಎರಡು ಗುಂಪುಗಳನ್ನಾಗಿ ಮಾಡಿ ಆಳುತ್ತಿದ್ದೀರಿ ಎಂದು ಕಿಡಿಕಾರಿದರು.
ಮುಖಂಡರ ಸಮ್ಮುಖದಲ್ಲೇ ವಿ.ಮುನಿಯಪ್ಪ ಹಾಗೂ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಸಂಧಾನಕ್ಕೆ ಯಾರೂ ಒಮ್ಮತ ಸೂಚಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು.