ಮೈತ್ರಿ ಧರ್ಮ ಪಾಲಿಸುವುದು ಕಾಂಗ್ರೇಸ್ ಕರ್ತವ್ಯ-ಶಾಸಕ ಸುರೇಶ್ ಗೌಡ

ನಾಗಮಂಗಲ, ಏ.5- ಮಂಡ್ಯ ಲೋಕಸಭೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ವಾಹನಗಳಿಗೆ ಶಾಸಕ ಸುರೇಶ್‍ಗೌಡ ಚಾಲನೆ ನೀಡಿದರು.

ಪಟ್ಟಣದ ಕೆ.ಮಲ್ಲೇನಹಳ್ಳಿ ಬಳಿಯಲ್ಲಿ ನಾಗಮಂಗಲ ಕ್ಷೇತ್ರವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ವಾಹನಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಏ.8 ಮತ್ತು 13ರಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ದೇವೇಗೌಡರು ಜಂಟಿಯಾಗಿ ಪ್ರಚಾರ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಮೈತ್ರಿ ಧರ್ಮ ಪಾಲಿಸುವುದು ಕಾಂಗ್ರೆಸ್ ಕರ್ತವ್ಯವಾಗಿದೆ. ಆದರೆ, ಮೂಲ ಕಾಂಗ್ರೆಸಿಗರು ಮೈತ್ರಿ ಪರವಾಗಿದ್ದರೆ ವಲಸೆ ಕಾಂಗ್ರೆಸಿಗರು ಮಾತ್ರ ತಮ್ಮ ರಾಜಕೀಯ ಅಸ್ತಿತ್ವದ ನೆಪದಲ್ಲಿ ವೈಯಕ್ತಿಕ ಹಿತಾಸಕ್ತಿಗಾಗಿ ವಿರುದ್ಧವಾಗಿದ್ದಾರೆ. ಎಲ್ಲೋ ಕುಳಿತು ಹೇಳುವವರ ಮಾತನ್ನ ಜನರು ಕೇಳುವಷ್ಟು ದಡ್ಡರಲ್ಲ, ನಮ್ಮ ಪಕ್ಷ ಏಕಾಂಗಿಯಾಗಿಯೇ ಚುನಾವಣೆ ಎದುರಿಸುವಷ್ಟು ಶಕ್ತಿಯುತವಾಗಿದೆ ಎಂದು ಶಾಸಕ ಸುರೇಶ್‍ಗೌಡ ಟಾಂಗ್ ಕೊಟ್ಟಿದ್ದಾರೆ.

ಈ ವೇಳೆ ಮುಖಂಡರಾದ ನೆಲ್ಲಿಗೆರೆ ಬಾಲು, ಕೋಳಿ ರಾಮು, ಡಿಟಿ ಶ್ರೀನಿವಾಸ್,ಪುರಸಭೆ ಸದಸ್ಯ ಚನ್ನಪ್ಪ, ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ