ಪ್ಯಾನ್ ಕಾರ್ಡ್ ಇಲ್ಲದೆ ನಡೆಯಲ್ಲ ಈ 10 ಕೆಲಸ!

ನವದೆಹಲಿ: ಪ್ಯಾನ್ ಕಾರ್ಡ್ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. 1961 ರ ಆದಾಯ ತೆರಿಗೆ ಕಾಯಿದೆಯ ವಿಭಾಗ 139 ರ ಪ್ರಕಾರ, ದೇಶದ ಎಲ್ಲ ಪ್ರಜೆಗಳು ತಮ್ಮ ಹಣಕಾಸು ವ್ಯವಹಾರಕ್ಕಾಗಿ ಪ್ಯಾನ್ (Permanent Account Number) ಹೊಂದಿರಬೇಕು. ಇದು ಫೋಟೋ ID ಯಂತೆ ಕಾರ್ಯನಿರ್ವಹಿಸುತ್ತದೆ. ಇದಿಲ್ಲದೆ, ಯಾವುದೇ ಹಣಕಾಸಿನ ಕೆಲಸ ಮಾಡುವುದು ಸುಲಭವಲ್ಲ.

ಪ್ರಸ್ತುತ ಸಮಯದಲ್ಲಿ, ಅದರ ಪ್ರಾಮುಖ್ಯತೆ ಬಹಳಷ್ಟು ಹೆಚ್ಚಾಗಿದೆ. ಪ್ಯಾನ್ ಕಾರ್ಡ್ ಇಲ್ಲದೆ ಸಾಧ್ಯವಾಗದ ಹಲವಾರು ವಿಷಯಗಳಿವೆ.

ಪ್ಯಾನ್ ಕಾರ್ಡ್ ಇಲ್ಲದೆ ನಡೆಯಲ್ಲ 10 ಕೆಲಸ:
1. ಬ್ಯಾಂಕ್ ಖಾತೆ ತೆರೆಯಲು ಅಥವಾ FD ಇಡಲು ಪ್ಯಾನ್ ಅತ್ಯಗತ್ಯ.
2. ಒಂದು ದಿನದಲ್ಲಿ 50,000 ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಖಾತೆಗೆ ಜಮಾ ಮಾಡಲು
3. ಯಾವುದೇ ಆಸ್ತಿ ಖರೀದಿಸಲು
4. ವಾಹನ ಖರೀದಿಸಲು
5. ವಿದೇಶ ಪ್ರಯಾಣಕ್ಕಾಗಿ ವಿಮಾನ ಟಿಕೆಟ್ ಬುಕ್ಕಿಂಗ್’ಗಾಗಿ
6. ಹೋಟೆಲ್ ಬಿಲ್ ಪೇಮೆಂಟ್ ಮಾಡಬೇಕಾದರೆ
7. ಶೇರ್, ಬಾಂಡ್, ಮ್ಯೂಚುಯಲ್ ಫಂಡ್ ಅಥವಾ ಡಿಬೆನ್ಚರ್ ಖರೀದಿಗೆ
8. ಕ್ರೆಡಿಟ್, ಡೆಬಿಟ್ ಕಾರ್ಡ್ ಅಥವಾ ಡಿಮೆಟ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲು
9. ಯಾವುದೇ ರೀತಿಯ ಆದಾಯವನ್ನು ತೋರಿಸುವಾಗ ಪ್ಯಾನ್ ಕಾರ್ಡ್ ಇಲ್ಲದಿದ್ದರೆ 20 ಪ್ರತಿಶತದಷ್ಟು ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ.
10. ಪ್ರಿ-ಪೇಡ್ ಮನಿ ವಾಲೆಟ್ ಅಥವಾ ಗಿಫ್ಟ್ ಕಾರ್ಡ್ ನೊಂದಿಗೆ 50,000 ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರ ಮಾಡಲು ಪ್ಯಾನ್ ಕಾರ್ಡ್ ಅತಿ ಮುಖ್ಯವಾಗಿದೆ.

ಪ್ಯಾನ್ ಕಾರ್ಡ್ ಇಷ್ಟು ಮುಖ್ಯವಾಗಿದ್ದಾಗ, ಈ ಲೇಖನದ ಮೂಲಕ ನೀವು ಆನ್ಲೈನ್ ​​ಮೂಲಕ ಅರ್ಜಿ ಸಲ್ಲಿಸಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ…
1. ಮೊದಲಿಗೆ https://www.tin-nsdl.com/ ಅಥವಾ https://www.pan.utiitsl.com/PAN/ ವೆಬ್ಸೈಟ್ ಗೆ ಭೇಟಿ ನೀಡಿ.
2. ಇಲ್ಲಿ ಪ್ಯಾನ್ ಕಾರ್ಡಿಗೆ ಅಪ್ಲೈ ಮಾಡಲು ಅರ್ಜಿಯೊಂದು ತೆರೆಯುತ್ತದೆ.
3. ಅದರಲ್ಲಿ ನೀವು ನಿಮ್ಮ ಮೂಲ ಮಾಹಿತಿ- ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ತುಂಬಿರಿ.
4. ನಿಮ್ಮ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ನಂತರ ಆನ್ಲೈನ್ ನಲ್ಲಿ ಶುಲ್ಕವನ್ನು ಪಾವತಿಸಿ.
5. ಪ್ಯಾನ್ ಕಾರ್ಡ್ ಪಡೆಯಲು ಆನ್ಲೈನ್ ಪ್ರೊಸೆಸಿಂಗ್ ಶುಲ್ಕ ಭಾರತೀಯ ನಾಗರೀಕರಿಗೆ 93 ರೂ. ಮತ್ತು ವಿದೇಶಿಯರಿಗೆ 864 ರೂ. ಪಾವತಿಸಬೇಕಾಗುತ್ತದೆ. ಇದರಲ್ಲಿ ಜಿಎಸ್ಟಿ ಸೇರಿಸಲಾಗಿಲ್ಲ.
6. ಶುಲ್ಕ ಪಾವತಿಸಿದ ಬಳಿಕ, ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ ಅದರ ಒಂದು ಪ್ರಿಂಟ್ ಔಟ್ ತೆಗೆದುಕೊಂಡು ಸಹಿ ಮಾಡಿ. ಅಗತ್ಯ ದಾಖಲೆಗಳೊಂದಿಗೆ ಕೊರಿಯರ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ NSDL/UTIITSL ಗೆ ಅದನ್ನು ಕಳುಹಿಸಬೇಕು.
ಗಮನಿಸಿ: ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಿದ 15 ದಿನಗಳ ಒಳಗೆ ಈ ಡಾಕ್ಯುಮೆಂಟ್ ತಲುಪಬೇಕು.

ಪ್ಯಾನ್ ಅನ್ನು ಆಧಾರ್ ಕಾರ್ಡಿಗೆ ಸಂಪರ್ಕಿಸುವುದು ಕೂಡ ಇದೀಗ ಕಡ್ಡಾಯವಾಗಿದೆ. ನೀವು ಈ ಲಿಂಕ್ನಲ್ಲಿ(https://www.tin-nsdl.com/) ಪ್ಯಾನ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ