ಕುಟುಂಬ ರಾಜಕಾರಣವನ್ನು ನಾನು ವಿರೋಧಿಸುವುದಿಲ್ಲ-ಯುಪಿಪಿ ಅಧ್ಯಕ್ಷ ಹಾಗೂ ನಟ ಉಪೇಂದ್ರ

ಹಾಸನ, ಏ.3- ದೇಶದ ಜನರಿಗೆ ರಾಜಕೀಯದ ಬಗ್ಗೆ ಇರುವ ತಪ್ಪುಕಲ್ಪನೆ ಬದಲಾಗುವುದು ಜನರಿಂದ-ಜನರಿಗಾಗಿ -ಜನರಿಗೋಸ್ಕರ ಎಂಬ ಸಂವಿಧಾನದ ಆಶಯ ನಿಜವಾದಾಗ ಮಾತ್ರ ಎಂದು ಉತ್ತಮ ಪ್ರಜಾಕೀಯ ಪಕ್ಷದ (ಯುಪಿಪಿ) ರಾಜ್ಯ ಘಟಕದ ಅಧ್ಯಕ್ಷ ಹಾಗೂ ನಟ ಉಪೇಂದ್ರ ತಿಳಿಸಿದರು.

ದೇಶದಲ್ಲಿ ಹಲವು ಪಕ್ಷಗಳು ಅಧಿಕಾರ ನಡೆಸಿವೆ, ನಡೆಸುತ್ತಲೂ ಇವೆ. ಆದರೆ, ಜನರ ಆಶಯಕ್ಕೆ ಪೂರಕವಾಗಿ ಇಲ್ಲ ಎಂಬುದು ದೇಶದಲ್ಲಿರುವ ನಿರುದ್ಯೋಗ, ಬಡತನ, ಅಸಮಾನತೆ, ಜಾತೀಯತೆ ನೋಡಿದರೆ ತಿಳಿಯುತ್ತದೆ. ಭಾರತದಂತಹ ಜಾತ್ಯಾತೀತ ದೇಶದ ಚುನಾವಣೆಯಲ್ಲಿ ಜಾತಿ ಆಧಾರದಲ್ಲಿ ಸ್ಪರ್ಧೆ ನಡೆಯುತ್ತಿದೆ.

ಜನರ ಭಾವನೆಯೊಂದಿಗೆ ಇಂದಿಗೂ ಆಟವಾಡಲಾಗುತ್ತದೆ. ಇದು ಬದಲಾಗಬೇಕು ಎಂದರು.

ನಮ್ಮ ಪಕ್ಷ ಗೆದ್ದೇ ಗೆಲ್ಲುತ್ತದೆ ಎಂದು ಹೇಳಲಾಗದು.ಆದರೆ, ಇದು ಪ್ರಥಮ ಪ್ರಯತ್ನ.ಪಕ್ಷ ಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಪಕ್ಷವು ಬೆಳವಣಿಗೆ ಹಾಗೂ ರಾಜಕೀಯ ಬದಲಾವಣೆಗೆ ನಾಂದಿಯಾಗಲಿದೆ ಎಂಬ ನಂಬಿಕ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಕುಟುಂಬ ರಾಜಕಾರಣವನ್ನು ವಿರೋಧಿಸುವುದಿಲ್ಲ. ಯುವಕರು ರಾಜಕೀಯಕ್ಕೆ ಬರುವುದರಿಂದ ಹೊಸತನದ ಹಾಗೂ ಹೊಸ ಚಿಂತನೆಗಳು ಹೊರಬರುತ್ತವೆ. ಇದು ದೇಶದ ಅಭಿವೃದ್ಧಿಗೆ ಪೂರಕ ಎಂದು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಚಂದ್ರೇಗೌಡ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ