ಮಿಗ್ 27 ವಿಮಾನ ಪತನ: ಪೈಲಟ್ ಪಾರು

ಜೋಧಪುರ: ರಾಜಸ್ಥಾನದ ಜೋಧಪುರ ಬಳಿ ಮತ್ತೊಂದು ಮಿಗ್ 27 ಯುದ್ಧ ವಿಮಾನ ಪತನವಾಗಿದೆ. ಅದೃಷ್ಟವಶಾತ್ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಎಂದಿನಂತೆ ಗಸ್ತು ತಿರುಗುತ್ತಿದ್ದ ಮಿಗ್ 27, ಎಂಜಿನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಪತನಗೊಂಡಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಿಗ್ 27 ಯುದ್ಧ ವಿಮಾನ ಇಂದು ಬೆಳಗ್ಗೆ 11.45ರ ಸುಮಾರಿಗೆ ದುರಂತಕ್ಕೀಡಾಗಿದ್ದು, ಜೋಧಪುರದಿಂದ 120 ಕಿ.ಮೀ ದೂರದಲ್ಲಿ ಅವಶೇಷಗಳು ಪತ್ತೆಯಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ