ಮೈ ಭೀ ಚೌಕಿದಾರ್​ ಅಭಿಯಾನಕ್ಕೆ ಪ್ರಧಾನಿ ಚಾಲನೆ

ನವದೆಹಲಿ: ಮೈ ಭೀ ಚೌಕಿದಾರ್​ ಅಭಿಯಾನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ದೆಹಲಿಯ ತಾಲ್ ಕಟೋರಾ ಮೈದಾನದಲ್ಲಿ ಮೈ ಭಿ ಚೌಕಿದಾರ್ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ ಚೌಕಿದಾರ್‌ನಾಗಿ ನಾನು ನನ್ನ ಕೆಲಸ ಮುಂದುವರಿಸುತ್ತೇನೆ. ಚೌಕೀದಾರ್‌ ಕುರಿತಾಗಿನ ಸ್ಫೂರ್ತಿ ಹೆಚ್ಚುತ್ತಿರುವುದು ನನಗೆ ಸಂತಸ ಸಂತಿದೆ ಎಂದರು.

ಇದೇ ವೇಳೆ ದೇಶದ 500 ಸ್ಥಳಗಳ ಮತದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಸಂವಾದ ನಡೆಸಿದ ಪ್ರಧಾನಿ ನಾನು ದೇಶಾದ್ಯಂತ ಇರುವ ಚೌಕೀದಾರ್‌ಗಳಿಗೆ ನನ್ನ ಶುಭ ಕೋರುತ್ತೇನೆ ಎಂದರು. ಲೋಕಸಭಾ ಚುನಾವಣೆ ಬಳಿಕ ನನ್ನೊಂದಿಗೆ 130 ಕೋಟಿ ಭಾರತೀಯರು ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಮತ್ತೆ ತಾವೇ ಪ್ರಧಾನಿಯಾಗುವುದಾಗಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದ ಭ್ರಷ್ಟಾಚಾರಿಗಳನ್ನು, ಲೂಟಿ ಮಾಡುವವರನ್ನು ಚೌಕಿದಾರರು ಸಹಿಸಿಕೊಳ್ಳುವುದಿಲ್ಲ ಎಂದ ಮೋದಿ, ಯಾರು ದೇಶವನ್ನು ಲೂಟಿ ಮಾಡಿದ್ದಾರೆ ಅವರು ಬೆಲೆ ತೆರಲೇಬೇಕಾಗಿದೆ ಎಂದು ಹೇಳುವ ಮೂಲಕ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಯುಪಿಎ ಭ್ರಷ್ಟಾಚಾರದಲ್ಲಿ ತೊಡಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ದೇಶದ ಹಿತಾಸಕ್ತಿಗಿಂತಲೂ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾಗಿತ್ತು. ಜನರು ಅವರಿಗೆ ನೀಡಿದ್ದ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿ ಯುಪಿಎ ಸರ್ಕಾರ ವಿಫಲವಾಗಿತ್ತು ಎಂದಿದ್ದಾರೆ.

ವಿಪಕ್ಷಗಳು ಬಾಲಾಕೋಟ್ ಮೇಲಿನ ವೈಮಾನಿಕ ದಾಳಿಯ ಬಗ್ಗೆ ವಿಪಕ್ಷಗಳು ಸಾಕ್ಷ್ಯ ಕೇಳಿದ್ದವು, ಸೇನೆಯನ್ನು ಪ್ರಶ್ನಿಸಿದ್ದವು, ಸಾಕ್ಷ್ಯ ಕೇಳಿ ಪಾಕಿಸ್ತಾನದ ಪರವಾಗಿ ಮಾತನಾಡುವುದೇಕೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ