ಮೇಲ್ಸೇತುವೆ ಹತ್ತುವಾಗ ಉರುಳಿಬಿದ್ದ ಬಸ್-ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಬೆಂಗಳೂರು, ಮಾ.27- ರಾಜಾಜಿನಗರ 1ನೆ ಬ್ಲಾಕ್‍ನಲ್ಲಿ ಬಿಎಂಟಿಸಿ ಬಸ್ ಮೇಲ್ಸೇತುವೆ ಹತ್ತುವ ಸಂದರ್ಭದಲ್ಲಿ ಡಿವೈಡರ್‍ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಅದೃಷ್ಟವಶಾತ್ ಬಸ್‍ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕ ಸೇರಿದಂತೆ 13 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಕೆಎಚ್‍ಬಿ ಕಾಲೋನಿಯಿಂದ ಕಾವಲ್ ಭೈರಸಂದ್ರಕ್ಕೆ ತೆರಳುತ್ತಿದ್ದ ರೂಟ್ ನಂ.180 ಸಂಖ್ಯೆಯ ಬಿಎಂಟಿಸಿ ಬಸ್ ಇಂದು ಬೆಳಗ್ಗೆ 11.15ರ ಸಮಯದಲ್ಲಿ ರಾಜಾಜಿನಗರ 1ನೆ ಬ್ಲಾಕ್ ಬಳಿ ಮೇಲ್ಸೇತುವೆ ಹತ್ತುವ ಸಂದರ್ಭದಲ್ಲಿ ಡಿವೈಡರ್‍ಗೆ ಡಿಕ್ಕಿ ಹೊಡೆದು ಉರುಳಿ ಬಿತ್ತು.

ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ 13 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು , ಸಾರ್ವಜನಿಕರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಸಂಚಾರಿ ಪೊಲೀಸರು ಆಗಮಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಟ್ರಾಫಿಕ್ ಜಾಮ್: ರಸ್ತೆಯಲ್ಲಿ ಬಸ್ ಉರುಳಿ ಬಿದ್ದಿದ್ದರಿಂದ ಕೆಲ ಕಾಲ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಿಸಲು ಹರಸಾಹಸ ಪಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ