ನಮ್ಮ ಜಿಲ್ಲೆ ಏನು ರೆಡ್​ಲೈಟ್​ ಏರಿಯಾನಾ? ಯಾರು, ಯಾವಾಗ ಬೇಕಾದ್ರೂ ಬರುವುದಕ್ಕೆ; ಕೆ.ಎನ್​ ರಾಜಣ್ಣ

ತುಮಕೂರು:  ಜಿಲ್ಲೆಯಲ್ಲಿ ಕಾಂಗ್ರೆಸ್​ ಉಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕಾಂಗ್ರೆಸ್​ಗೆ ಅನಾನುಕೂಲವಾಗುವ ಕೆಲಸವನ್ನಲ್ಲ.  ನಮ್ಮ ಜಿಲ್ಲೆ ಏನು ರೆಡ್​ಲೈಟ್​ ಏರಿಯಾನಾ ಯಾರು ಬೇಕಾದರೂ ಬಂದು ಹೋಗೋಕೆ ಎಂದು ದೇವೇಗೌಡರ ವಿರುದ್ಧ ಕಾಂಗ್ರೆಸ್ ರೆಬೆಲ್​​ ನಾಯಕ ಕೆ.ಎನ್​ ರಾಜಣ್ಣ ದೇವೇಗೌಡರ ವಿರುದ್ಧ ಕಿಡಿಕಾರಿದರು.

ಈ ಹಿಂದೆ ಅನಿತಾ, ನೆಲಮಂಗಲದ ಎಂಎಲ್​ಸಿ  ಬಂದ್ರೂ ಹೋದರು. ಈಗ ಈ ಸಾಯೆಬ್ರೂ ಬಂದಿದ್ದಾರೆ. ಅವರು ಇರುತ್ತಾರೊ ಇಲ್ಲವೋ. ಗೊತ್ತಿಲ್ಲ. ಜಿಲ್ಲೆಯೇನು ಬಾಂಬೆಯಲ್ಲಿರುವ ರೀತಿಯ ರೆಡ್ ಲೈಟ್ ಏರಿಯಾನಾ. ಹೀಗೆ  ಯಾರ್ಯಾರೋ ಬಂದು ಹೋಗೋಕೆ  ಎಂದು ಪ್ರಶ್ನಿಸಿದರು.

ಟಿಕೆಟ್​ ಸಿಗದ ಹಿನ್ನೆಲೆ ರೆಬೆಲ್​ ಆಗಿ ಜೆಡಿಎಸ್​ ವರಿಷ್ಠ ದೇವೇಗೌಡ ವಿರುದ್ಧ ಕಣಕ್ಕೆ ಇಳಿದಿರುವ ಮುದ್ದ ಹನುಮೇಗೌಡ  ಅವರು ನಾಮಪತ್ರ ಹಿಂಪಡೆಯುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಅವರು ಸ್ಪಷ್ಟಪಡಿಸಿದರು.

ಕ್ಷೇತ್ರದಲ್ಲಿ ಟಿಕೆಟ್​ ಪಡೆಯುವಲ್ಲಿ ವಿಫಲವಾದ ಹಿನ್ನೆಲೆ ಬಂಡಾಯವೆದ್ದಿರುವ ಹಾಲಿ ಸಂಸದ ಮುದ್ದ ಹನುಮೇಗೌಡ ರೆಬೆಲ್​ ಆಗಿ ನಾಮಪತ್ರ ಸಲ್ಲಿಸಿದ್ದರು.

ಇವರ ಹಿಂದೆ ಮುದ್ದ ಹನುಮೇಗೌಡಗೆ ಸಾಥ್​ ನೀಡಿ ಕೆ.ಎನ್​ ರಾಜಣ್ಣ ಕೂಡ ನಾಮಪತ್ರ ಸಲ್ಲಿಸಿದ್ದರು.

ಇವರಿಬ್ಬರ ನಾಮಪತ್ರದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪಕ್ಷ ನಾಮಪತ್ರ ಹಿಂಪಡೆಯುವಂತೆ  ಮನವೊಲಿಸಿದರೂ ಪ್ರಯೋಜನವಾಗಿಲ್ಲ. ಅಲ್ಲದೇ ಮಂಗಳವಾರ ತಡರಾತ್ರಿ ಕೂಡ ದೇವೇಗೌಡ ಹಾಗೂ ಡಿಸಿಎಂ ಮುದ್ದ ಹನುಮೇಗೌಡರಿಗೆ ಮಾಡಿದ ಮನವೊಲಿಕೆ ಯತ್ನ ಕೂಡ ವಿಫಲವಾಗಿದೆ.

ಈ ಬಗ್ಗೆ ಇಂದು ಮಾತನಾಡಿರುವ ಕೆ.ಎನ್​ ರಾಜಣ್ಣ, ನಾಮಪತ್ರ ವಾಪಸ್ ಪಡೆಯಲು ಒತ್ತಡ ಹೆಚ್ಚಾಗುತ್ತಿದೆ. ನಾಮಪತ್ರ ಹಿಂಪಡೆಯುವುದೆಲ್ಲ ಮುದ್ದಹನುಮೇಗೌಡರ ವಿವೇಚನೆಗೆ ಬಿಟ್ಟಿದ್ದು.  ಮುದ್ದ ಹನುಮೇಗೌಡ ನಾಮಪತ್ರ ವಾಪಸ್ ಪಡೆದರೆ, ನಾನೂ ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆ ಇದೆ. ಆದರೆ ಅಂತಿಮ ನಿರ್ಣಯವಾಗಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ನಮ್ಮ‌ ಮುಖಂಡರು ಅವರು ಏನು ಹೇಳುತ್ತಾರೆ. ಅದಕ್ಕೆ, ನಾವು ಪರಿಗಣನೆಗೆ ಇಟ್ಟುಕೊಳ್ಳಬೇಕಾಗುತ್ತೆ. ಆ ನಿಟ್ಟಿನಲ್ಲಿ ಎಲ್ಲೂ ಯಾವ ಚರ್ಚೆ ಆಗಿಲ್ಲ, ಇವತ್ತು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇವೆ. ಇಂದು ಸಂಜೆ ಅಂತಿಮ‌‌ ನಿರ್ಧಾರ ತಿಳಿಸಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ