ಕಾಂಗ್ರೇಸ್ ಕೊಟ್ಟ ಮಾತಿನಂತೆ ನಡೆದುಕೊಂಡಿದೆ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಮಾ.26-.ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು, ಈ ಮೊದಲು ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಅರಣ್ಯ ಹಕ್ಕು ಕಾಯ್ದೆ, ಆರ್‍ಟಿಇ, ಆರ್‍ಟಿಐ, ಉದ್ಯೋಗ ಖಾತ್ರಿ, ಭೂ ಸ್ವಾಧೀನ ಪರಿಹಾರ ಕಾಯ್ದೆಯಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ಕಾಂಗ್ರೆಸ್. ಈ ಯೋಜನೆಗಳು ಜನ ಸಾಮಾನ್ಯರ ಪರವಾಗಿದ್ದು, ಶ್ರೀಮಂತ ವರ್ಗ ಅವುಗಳನ್ನು ವಿರೋಧಿಸಿದವು.ಬಿಜೆಪಿಯ ಆರ್ಥಿಕ ತಜ್ಞರು ಕೂಡ ಇವುಗಳನ್ನು ವಿರೋಧಿಸಿದರು ಎಂದರು.

ಕಾಂಗ್ರೆಸ್ ಜನಸಾಮಾನ್ಯರ ಪರವಾಗಿ ಯೋಜನೆಗಳನ್ನು ರೂಪಿಸಿದರೆ, ಬಿಜೆಪಿ ಶ್ರೀಮಂತರ ಪರವಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಮೋದಿ ಅವರು ಶ್ರೀಮಂತರ 3.17 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು.ಚೌಕಿದಾರ್ ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಅವರ ಐದು ವರ್ಷದ ಆಡಳಿತಾವಧಿಯಲ್ಲಿ ಒಂದೂ ಜನಪರ ಯೋಜನೆಗಳನ್ನೂ ಜಾರಿಗೆ ತಂದಿಲ್ಲ. ಕೇವಲ ಕಪಟತನದಿಂದ ನಡೆದುಕೊಂಡು ಸುಳ್ಳು ಹೇಳುತ್ತಲೇ ರಾಜಕಾರಣ ಮಾಡುತ್ತಿದ್ದಾರೆ ಎಂದು ದಿನೇಶ್‍ಗುಂಡೂರಾವ್ ಟೀಕಿಸಿದರು.

ರಾಹುಲ್‍ಗಾಂಧಿ ಅವರು ಪ್ರಕಟಿಸಿರುವ ಯೋಜನೆಯಿಂದ ದೇಶದ 5 ಕೋಟಿ ಕುಟುಂಬಗಳಿಗೆ ವರ್ಷಕ್ಕೆ 72ಸಾವಿರ ಕನಿಷ್ಠ ವಾರ್ಷಿಕ ವರಮಾನ ಖಾತ್ರಿ ದೊರೆಯಲಿದೆ.

ಪ್ರತಿ ವರ್ಷ ಇದಕ್ಕಾಗಿ ಮೂರು ಲಕ್ಷ ಕೋಟಿ ಖರ್ಚಾಗಲಿದೆ.ಅದೇನೆ ಇದ್ದರೂ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಪ್ರತಿ ಬಾರಿ ನಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ