ಜೆಟ್ ಏರ್ ವೇಸ್ ಸಂಸ್ಥೆಗೆ ನರೇಶ್ ಗೋಯಲ್ ಮತ್ತು ಅನಿತಾ ಗೋಯಲ್ ರಾಜೀನಾಮೆ

ನವದೆಹಲಿ: ಆರ್ಥಿಕ ಸಂಕಷ್ಟಕ್ಕೀಡಾಗಿರುವ ಜೆಟ್ ಏರ್ ವೇಸ್ ಸಂಸ್ಥೆ ಸ್ಥಾಪಕ ಹಾಗೂ ಅಧ್ಯಕ್ಷ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರು ವಿಮಾನಯಾನ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.

25 ವರ್ಷಗಳ ಬಳಿಕ ತಾವೇ ಹುಟ್ಟುಹಾಕಿದ ಜೆಟ್ ಏರ್​ವೇಸ್ ನಿಂದ ಗೋಯಲ್ ದಂಪತಿ ಹೊರಬಂದಿದ್ದಾರೆ.

1993ರಲ್ಲಿ ನರೇಶ್ ಗೋಯಲ್ ಮತ್ತು ಪತ್ನಿ ಅನಿತಾ ಅವರು ಜೆಟ್ ಏರ್ ​ವೇಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದೀಗ ಗೋಯಲ್ ಅವರ ನಿರ್ಗಮನದ ನಂತರ ಕಂಪನಿಯ ಆಡಳಿತ ಮಂಡಳಿಯಲ್ಲಿ ಸಿಇಓ ವಿನಯ್ ದುಬೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ನರೇಶ್ ಗೋಯಲ್ ಅವರು ಆರ್ಥಿಕ ಸಂಕಷ್ಟದಲ್ಲಿರುವ ಜೆಟ್‌ ಎರ್ ವೇಸ್ ವಿಮಾನಯಾನ ಸಂಸ್ಥೆಯನ್ನು ಮೇಲಕ್ಕೆತ್ತಲು ಹೆಚ್ಚು ಶ್ರಮಪಟ್ಟಿದ್ದರು. ಆದರೆ ಯಾವುದೂ ಕೈಗೂಡಿರಲಿಲ್ಲ. ಜೆಟ್ ಏರ್‌ ವೇಸ್ ಸಂಸ್ಥೆಯ ಹೆಚ್ಚಿನ ವಿಮಾನಗಳು ಹಾರಾಟ ನಡೆಸುತ್ತಿಲ್ಲ.

ಈ ಮಧ್ಯೆ, ನರೇಶ್ ಗೋಯಲ್ ಬೋರ್ಡ್ ಸದಸ್ಯತ್ವದಿಂದ ಕೆಳಗಿಳಿದರೆ ಮಾತ್ರ ಸಾಲ ನೀಡಲು ಸಾಧ್ಯ ಎಂದು ಈಗಾಗಲೇ ಬ್ಯಾಂಕ್ ಹೇಳಿಕೆ ನೀಡಿತ್ತು. ಈ ಹಿನ್ನಲೆಯಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ನರೇಶ್ ಗೋಯಲ್ ಹಾಗೂ ಪತ್ನಿ ಅನಿತಾ ಗೋಯಲ್ ಸಂಸ್ಥೆಗೆ ರಾಜಿನಾಮೆ ನೀಡಿದ್ದಾರೆ.

Jet Airways founder Naresh Goyal, wife Anita resign from board

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ