ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಮೂವರ ಬಂಧನ

ಬೆಂಗಳೂರು, ಮಾ.23-ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಮೂವರು ಕಳ್ಳರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿ 50 ಲಕ್ಷ ರೂ. ಬೆಲೆ ಬಾಳುವ 8 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ಕೇರಳದ ಶೈಜು (36), ಉನ್ನಿ (30) ಮತ್ತು ರಿಯಾಜ್ (40) ಬಂಧಿತ ಅಂತಾರಾಜ್ಯಕಳ್ಳರು.

ಆರೋಪಿಗಳ ಬಂಧನದಿಂದ ಬೊಮ್ಮನಹಳ್ಳಿ, ಬಾಣಸವಾಡಿ, ಹುಣಸೂರು, ಅತ್ತಿಬೆಲೆ, ಮೈಸೂರು ದಕ್ಷಿಣ, ಬಿಡದಿ, ಶ್ರೀರಂಗಪಟ್ಟಣ ಠಾಣಾ ಸರಹದ್ದುಗಳಲ್ಲಿ ನಡೆದಿದ್ದ 8 ವಾಹನಗಳ ಕಳವು ಪ್ರಕರಣ ಬೆಳಕಿಗೆ ಬಂದಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 3 ಬೊಲೆರೋ ಜೀಪ್‍ಗಳು, ಎರಡು ಟವೇರಾ ಕಾರುಗಳು, ಸ್ಕಾರ್ಪಿಯೋ, ಇಂಡಿಗೋ ಹಾಗೂ ಟಾಟಾ ಇಂಡಿಕಾ ಕಾರುಗಳನ್ನು ವಶಪಡಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ