ನ್ಯೂಜಿಲ್ಯಾಂಡ್​ನಲ್ಲಿ ಸೆಮಿ ಅಟೊಮ್ಯಾಟಿಕ್​ ಗನ್​​ ಹಾಗೂ ರೈಫಲ್ ಮಾರಾಟ ನಿಷೇಧ

ವೆಲ್ಲಿಂಗ್ಟನ್​: ನ್ಯೂಜಿಲ್ಯಾಂಡ್​ನಲ್ಲಿ ಕ್ರೈಸ್ಟ್​​ಚರ್ಚ್​ನಲ್ಲಿ ನಡೆದ ದಾಳಿಯಲ್ಲಿ 50 ಮಂದಿ ನಾಗರಿಕರು ಸಾವನ್ನಪ್ಪಿದ್ದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಅತೋಮ್ಯಾಟಿಕ್ ಗನ್ ಗಳ ಮಾರಾಟ ನಿಷೇಧಿಸಿದೆ.

ಮಿಲಿಟರಿ ಮಾದರಿಯ ಸೆಮಿ ಅಟೊಮ್ಯಾಟಿಕ್​​ ಹಾಗೂ ಮಾನವ ಚಾಲಿತ ಗನ್​​ಗಳ ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸಿ ನ್ಯೂಜಿಲ್ಯಾಂಡ್​ ಪ್ರಧಾನಿ ಜಸಿಂಡಾ ಆರ್ಡೆನ್ ಆದೇಶಿಸಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಜಸಿಂಡಾ, ನ್ಯೂಜಿಲ್ಯಾಂಡ್​ ದೇಶದಲ್ಲಿ ಮಿಲಿಟರಿ ಮಾದರಿ ಸೆಮಿ ಅಟೊಮ್ಯಾಟಿಕ್​ ಗನ್​​ ಹಾಗೂ ರೈಫಲ್​ಗಳಗಳನ್ನು ಬ್ಯಾನ್ ಮಾಡಲಾಗಿದೆ. ಈ ಆದೇಶ ತಕ್ಷಣದಿಂದ ಜಾರಿಯಾಗಲಿದೆ ಎಂದಿದ್ದಾರೆ.

ಈ ಆದೇಶದ ಬಳಿಕ ಯಾವುದೇ ವ್ಯಕ್ತಿಯೂ ನ್ಯೂಜಿಲ್ಯಾಂಡ್​​ನಲ್ಲಿ ನಿಷೇಧಕ್ಕೊಳಗಾದ ಗನ್​ಗಳನ್ನು ಮಾರಾಟ ಹಾಗೂ ಖರೀದಿ ಮಾಡುವಂತಿಲ್ಲ. ಖರೀದಿಗೆ ಪೊಲೀಸರ ಅನುಮತಿ ಕಡ್ಡಾಯ ಎಂದಿರುವ ಜಸಿಂಡಾ, ದೇಶದ ಜನತೆ ಇನ್ನು ಮುಂದಿನ ದಿನಗಳಲ್ಲಿ ಇಂತಹ ಗನ್​ಗಳನ್ನು ಖರೀದಿಸಲು ಅನುಮತಿ ಕೇಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ