ಹದಡಿ ಪೊಲೀಸ್ ಠಾಣೆ ಆವರಣದಲ್ಲಿ ರಕ್ತದಾನ ಶಿಬಿರ-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಶ್ಲಾಘನೆ

ದಾವಣಗೆರೆ, ಮಾ.16- ಪೆÇಲೀಸ್ ಇಲಾಖೆಯ ಮುಖ್ಯ ಕಾರ್ಯ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಂಚಾರಿ ನಿಯಮ ಪಾಲನೆ, ಅಪರಾಧಗಳನ್ನು ತಡೆಗಟ್ಟುವುದಾಗಿದೆ. ಇಂತಹ ಜವಾಬ್ದಾರಿಯುತ ಕರ್ತವ್ಯಗಳ ನಡುವೆಯೂ ಹದಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಿರುವುದು ಇತರೆ ಪೆÇಲೀಸ್ ಠಾಣೆಗಳಿಗೆ ಮಾದರಿ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಶ್ಲಾಘಿಸಿದರು.

ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ಪೆÇಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಮತ್ತು ಔಷಧೀಯ ಸಸ್ಯಗಳ ತೋಟದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿವೆ. ಈ ತಪ್ಪು ಕಲ್ಪನೆಗಳನ್ನು ಅಳಿಸಿ ಹಾಕಲು ಇಂತಹ ಕಾರ್ಯಗಳು ಅವಶ್ಯಕ ಎಂದರು.

ಠಾಣೆಯ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸುವ ಜೊತೆಗೆ ದೇವರಾಜ್ ನೇತೃತ್ವದ ತಂಡವು ಪೆÇಲೀಸ್ ಠಾಣೆಯ ಆವರಣದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿರುವುದು ಸ್ವಾಗತಾರ್ಹ. ಇಂತಹ ಕಾರ್ಯಗಳನ್ನು ಇತರೆ ಪೆÇಲೀಸ್ ಠಾಣೆಗಳಿಗೂ ಮಾಡುವಂತೆ ಸೂಚಿಸಲಾಗುವುದು ಎಂದರು.

ಡಿವೈಎಸ್‍ಪಿ ಡಾ.ಬಿ. ದೇವರಾಜ ಮಾತನಾಡಿ, ನಾನು ಪ್ರಭಾರದಲ್ಲಿದ್ದಾಗ ಇಲ್ಲಿ ಶ್ರಮದಾನ ಮಾಡಿದ್ದೆ. ಅದೇ ರೀತಿ ಇಲ್ಲಿ ಔಷಧೀಯ ಸಸ್ಯಗಳನ್ನು ಬೆಳಸಲು ಚಿಂತನೆ ನಡೆಸಿದ್ದೆ. ಅದರಂತೆ ಇಂದು 70ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಅದರ ಮಹತ್ವವನ್ನು ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತಿಳಿಸುವ ಕಾರ್ಯವಾಗುತ್ತಿದೆ ಎಂದರು.

ರಕ್ತದಾನ ಮಾಡುವುದರಿಂದ ಹೃದಯಾಘಾತ ಸಂಭವ ಸೇರಿದಂತೆ ಅನೇಕ ಆರೋಗ್ಯದ ಸಮಸ್ಯೆಗಳು ಉದ್ಭವಿಸುವುದಿಲ್ಲ. ರಕ್ತದಾನ ಮಾಡುವುದರಿಂದ ನಾನು ಒಳ್ಳೆಯ ಕೆಲಸ ಮಾಡಿದ್ದೇವೆ ಎಂಬ ಆತ್ಮತೃಪ್ತಿ ಕೂಡ ಸಿಗಲಿದೆ ಎಂದರು.

ದಾವಣಗೆರೆ ಗ್ರಾಮಾಂತರ ಉಪಭಾಗದ ಉಪಾವೀಕ್ಷಕ ಶ್ರೀನಿವಾಸಲು, ಚಿಕ್ಕಸ್ವಾಮಿ, ಚಿಗಟೇರಿ ಆಸ್ಪತ್ರೆಯ ಕಾಂಚನ್ ಸಿಂಗ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಧನಂಜಯ್, ಲ್ಯಾಬ್ ಟೆಕ್ನಿಷಿಯನ್ ಶಕೀರ್ ಅಲಿ, ಸ್ಟಾಫ್‍ನರ್ಸ್ ರೇಣುಕಾ, ಮಹಿಳಾ ಪೇದೆ ಕುಮಾರಿ ಲಕ್ಷೀದೇವಿ, ಪರುಶುರಾಮ್ ಸೇರಿದಂತೆ ಠಾಣೆಯ ಎಲ್ಲಾ ಸಿಬ್ಬಂದಿಗಳು ಹದಡಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ