ಉಮೇಶ್ ಜಾಧವ್ ವಿರುದ್ಧ ಕೈ ಕಾರ್ಯಕರ್ತರ ಪ್ರಚಾರ

ಕಲಬುರಗಿ,ಮಾ.13- ಶಾಸಕ ಡಾ. ಉಮೇಶ್ ಜಾಧವ್ ಅವರು ಬಿಜೆಪಿಯ ಆಮಿಷಕ್ಕೆ ಒಳಗಾಗಿ ತಮ್ಮ ರಾಜಕೀಯ ಜೀವನ ಹಾಳು ಮಾಡಿಕೊಂಡಿದ್ದಾರೆ ಅವರು ಡಾ. ಆಮಿಷ ಎಂದು ಕಾರ್ಯಕರ್ತರು ಅವರ ವಿರುದ್ಧ ಪ್ರಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಡಾಕ್ಟರೇ ಆಪರೇಷನ್‍ನ ಒಳಗಾಗಿದ್ದಾರೆ ಪಕ್ಷದ ತತ್ವ-ಸಿದ್ದಾಂತ ಗಾಳಿಗೆ ತೂರಿದ್ದಾರೆ ಎಂದು ಕಾರ್ಯಕರ್ತರು ಅವರ ವಿರುದ್ಧ ಚುನಾವಣಾ ಸಮರ ಮಾಡಿದ್ದಾರೆ.

ಶಾಸಕ ಉಮೇಶ್ ಜಾಧವ್ ಅವರು ಬಿಜೆಪಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧಿಸುವುದು ಬಹುತೇಕ ಖಚಿತಾಗಿದ್ದು ಕೈ ದಳದಲ್ಲಿ ತೀವ್ರ ಆತಂಕ ಮೂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ