ಕುಟುಂಬ ರಾಜಕಾರಣದ ಬಗ್ಗೆ ಮಾತನಾಡದಿರುವುದೇ ಸರಿ : ಸಚಿವ ಆರ್.ವಿ.ದೇಶಪಾಂಡೆ

Karnataka Medical Education Minister Sharan Prakash R Patil and Karnataka Higher Education Minister R V Deshpande declares CET results in Bangalore on May 27, 2014. (Photo: IANS)

ಹುಬ್ಬಳ್ಳಿ, ಮಾ.9- ಕುಟುಂಬ ರಾಜಕಾರಣದ ಕುರಿತು ಮಾತನಾಡುವುದನ್ನು ಕಡಿಮೆ ಮಾಡುವುದೇ ಉತ್ತಮ ಎಂದು ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದು ರಾಜಕೀಯ, ಯಾವುದು ಕುಟುಂಬ ರಾಜಕೀಯ ಎಂದು ಹೇಳುವುದೇ ಕಷ್ಟವಾಗಿದೆ. ಹೀಗಿರುವಾಗ ಈ ಕುರಿತು ಮಾತನಾಡದಿರುವುದೇ ಸರಿ ಎಂದರು.

ಸುಮಲತಾ ಅಂಬರೀಶ್ ಅವರ ಕುರಿತು ಸಚಿವ ರೇವಣ್ಣನವರು ಹಾಗೆ ಮಾತನಾಡಬಾರದಿತ್ತು. ರೇವಣ್ಣ ನನ್ನ ಆತ್ಮೀಯ ಸ್ನೇಹಿತರು. ಅವರ ಬಗ್ಗೆ ನನಗೆ ಗೌರವವಿದೆ. ಈ ತರಹದ ವಿಚಾರ ಪ್ರಸ್ತಾಪವಾಗಲೇಬಾರದು ಎಂದು ಹೇಳಿದರು.

ಚುನಾವಣೆಯಲ್ಲಿ ಪರಸ್ಪರ ಅಪವಾದ ಮಾಡುವುದಕ್ಕಿಂತ ನಾವು ಮಾಡಿದ ಒಳ್ಳೆಯ ಕೆಲಸಗಳು, ಅಭಿವೃದ್ಧಿ ಕಾರ್ಯಗಳ ಕುರಿತು ಹೇಳಬೇಕು. ಯಾರೇ ಆಗಲಿ ವ್ಯಕ್ತಿಗತ ಟೀಕೆಯಿಂದ ದೂರವಿರಬೇಕು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ