ಎಂ.ವಿ.ಕೆ ಗೋಲ್ಡನ್ ಡೈರಿಗೆ ಸಿಎಂ ಕುಮಾರಸ್ವಾಮಿ ಶಂಕುಸ್ಥಾಪನೆ

ಕೋಲಾರ: ಕೋಲಾರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಎಂ.ವಿ.ಕೆ ಗೋಲ್ಡನ್ ಡೈರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಎಚ್.ಡಿ.ಕುಮಾರ್ ಸ್ವಾಮಿ, ಕೋಲಾರ ಚಿಕ್ಕಬಳ್ಳಾಪುರದ ಹಾಲು ಉತ್ಪಾದಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮೇಘಾ ಡೇರಿ ಹಾಗೂ ಗೋಲ್ಡನ್ ಡೇರಿ ಸ್ಥಾಪಿಸಲಾಗುತ್ತಿದೆ ಎಂದರು.

ಡಿಐಡಿಎಫ್ ನಿಂದ ಗೋಲ್ಡನ್ ಡೇರಿಗೆ ೫೦ ಕೋಟಿ ನೀಡಲಾಗುವುದು. ಪ್ರತಿ ಒಕ್ಕೂಟದವರು ಮೇಘಾ ಡೇರಿ ಯೋಜನೆ ಹಾಕಿಕೊಂಡೊದ್ದಾರೆ. ಇತ್ತೀಚಿಗೆ ಮೈಸೂರಿನಲ್ಲೂ ನಡೆದ ಒಕ್ಕೂಟದ ಕಾರ್ಯಕ್ರಮದಲ್ಲೂ ಬೇಡಿಕೆ ಇಟ್ಟಿದ್ದಾರೆ ಎಂದರು.

ರೇಷ್ಮೆ, ಹಾಲು, ತರಕಾರಿ ಬೆಳೆಯೊದು ಎರಡೂ ಜಿಲ್ಲೆ ರೈತರು ನಂಬಿ ಜೀವನ ನಡೆಸುತ್ತಿದ್ದಾರೆ. ಇಲ್ಲಿನ ನೀರಿನ ಸಮಸ್ಯೆಯಿದ್ದರೂ ಜೀವನ ನಡೆಸುತ್ತಿರುವುದು ಎರಡು ಜಿಲ್ಲೆಯವರು. ಗೋಲ್ಡನ್ ಡೇರಿ ನಿರ್ಮಾಣಕ್ಕೆ ಸರ್ಕಾರದಿಂದ‌ ಸಂಪೂರ್ಣ ಸಹಕಾರ ನೀಡುತ್ತೆವೆ. ಕೋಲಾರ ಜಿಲ್ಲೆಯ ಸಂಕಷ್ಟ ಕ್ಕೆ ೫೦ ಕೋಟಿ ನೀಡುವುದಾಗಿ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

ರೈತರ ಸಮಸ್ಯೆ ಗಮನದಲ್ಲಿಟ್ಟುಕೊಂಡು ಹಣ ಮಂಜೂರು. ರೇಷ್ಮೆ ಬೆಲೆ‌ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಬಸವರಾಜು ವರದಿ ಆಧಾರದ ಮೇಲೆ ಬೆಲೆ ನಿಗಧಿ ಮಾಡಲು ತೀರ್ಮಾನಿಸಲಾಗಿತ್ತು. ಬಸವರಾಜು ವರದಿ ವೈಜ್ಞಾನಿಕವಾಗಿರುವ ಬಗ್ಗೆ ರೈತರು ಗಮನಕ್ಕೆ ತಂದಿದ್ದಾರೆ. ವೈಜ್ಣಾನಿಕ ಬೆಲೆ ನಿಗಧಿ ಮಾಡಲು ರೈತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಕೃಷಿ ಸಚಿವ ಎನ್.ಹೆಚ್.ಶಿವಶಂಕರ್ ರೆಡ್ಡಿ, ಶಾಸಕರು ಹಾಗೂ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ವೈ. ನಂಜೇಗೌಡ, ಶಾಸಕರುಗಳಾದ ಕೆ. ಶ್ರೀನಿವಾಸಗೌಡ, ಎಸ್.ಎನ್. ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ