ಹಂಪಿ ಉತ್ಸವ ವಿಧ್ಯುಕ್ತ ಚಾಲನೆಗೆ ಕ್ಷಣಗಣನೆ

ಹಂಪಿಹಲವಾರು ಟೀಕೆ, ವಿಳಂಬದ ಬಳಿಕ ಇಂದು ಹಂಪಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ತೊರೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವವನ್ನು ಇಂದು ಸಂಜೆ ಆರು ಗಂಟೆಗೆ ಸಿಎಂ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

ಈ ಬಾರಿಯ ಹಂಪಿ ಉತ್ಸವಕ್ಕೆ ನಟ ದರ್ಶನ್​ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ.  ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದ ಮುಂಭಾಗದ ಬಸವಣ್ಣ ಬಳಿ ಪ್ರಮುಖ ವೇದಿಕೆಯ ನಿರ್ಮಿಸಲಾಗಿದೆ. ಕಾರ್ಯಕ್ರಮದಲ್ಲಿ ಸಚಿವ ಡಿ.ಕೆ.ಶಿವಕುಮಾರ್, ಸಾ.ರಾ.ಮಹೇಶ್, ತುಕಾರಾಂ, ಪರಮೇಶ್ವರ್ ನಾಯಕ್ ಹಾಗೂ  ಸ್ಥಳೀಯ ಶಾಸಕರು, ಸಂಸದರು ಉಪಸ್ಥಿತಿ ಇರಲಿದ್ದಾರೆ.

ಹಂಪಿ ಉತ್ಸವದಲ್ಲಿ ಒಟ್ಟು ನಾಲ್ಕು ವೇದಿಕೆ ನಿರ್ಮಿಸಿದ್ದು,ರೈತ ವಿಚಾರ ಸಂಕಿರಣ, ಮಹಿಳಾ, ಮಕ್ಕಳ ಉತ್ಸವ, ಕವಿಗೋಷ್ಟಿಗಳು ನಡೆಯಲಿವೆ. ಉತ್ಸವದ ಮೆರಗು ಹೆಚ್ಚಿಸಲು ಪ್ರಾಣೇಶ್, ಪ್ರೊ. ಕೃಷ್ಣೇಗೌಡರ ಹಾಸ್ಯ ರಸದೌತಣ ಕೂಡ ನಡೆಯಲಿದೆ. ಗಾಯಕ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಗಾನಸುಧೆಯೂ ಕೂಡ ಇರಲಿದೆ.  ಆಗಸದಿಂದ  ಹೆಲಿಕಾಪ್ಟರ್ ಮೂಲಕ ಹಂಪಿಯನ್ನು ವೀಕ್ಷಿಸುವ ವ್ಯವಸ್ಥೆಗೆ ಜಿಲ್ಲಾಧಿಕಾರಿ ಡಾ ರಾಮ ಪ್ರಸಾತ್, ಸಂಸದ ಉಗ್ರಪ್ಪ ಈಗಾಗಲೇ ಚಾಲನೆ ನೀಡಿದ್ದಾರೆ.

ಹಂಪಿ ಉತ್ಸವ ಅಂಗವಾಗಿ ವಿವಿಧ ವಸ್ತುಪ್ರದರ್ಶನ, ಪಾರಂಪರಿಕ ನಡಿಗೆ, ಗ್ರಾಮೀಣ ಕ್ರೀಡಾಸ್ಪರ್ಧೆ, ಸಾಹಸ ಕ್ರೀಡೆ ಜರುಗಲಿದ್ದು, ಇದೇ ಮೊದಲ ಬಾರಿಗೆ ಕುದುರೆ ಜಿಗಿತ, ಮೀನುಗಾರರ ತೆಪ್ಪ ಸ್ಪರ್ಧೆ, ಮರಳು ಶಿಲ್ಪಕಲೆ ಉತ್ಸವ ಜರುಗುತ್ತಿದೆ. ಒಟ್ಟಾರೆ ಎರಡು ದಿನಗಳ‌ ಕಾಲ ಜರುಗುವ ಉತ್ಸವಕ್ಕೆ ಜಿಲ್ಲಾಡಲಿತ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ