ನಡುರಸ್ತೆಯಲ್ಲಿ ಹುಲಿ ಪ್ರತ್ಯಕ್ಷ-ಆತಂಕದಲ್ಲಿರುವ ಸ್ಥಳೀಯರು

DCI ID: PLANET EARTH.257 Description: Tigress coming around tree {Panthera tigris tigrist}, Rajasthan India. Episode 10: Forests. Rights Notes: For Show Promotion Only Photographer: Anup Shah Image Post Date: 17-Jan-2007

ಕಾರವಾರ,ಮಾ.1- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗಣೇಶಗುಡಿ ಸಮೀಪ ಜಗಲಬೇಟಿ ರಸ್ತೆಯಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದೆ.

ನಡುರಸ್ತೆಯಲ್ಲೇ ಹುಲಿ ಕಾಣಿಸಿಕೊಂಡಿರುವುದರಿಂದ ಸ್ಥಳೀಯರಲ್ಲಿ ಹಾಗೂ ದಾರಿಹೋಕರಲ್ಲಿ ಆತಂಕ ಮನೆ ಮಾಡಿದೆ.

ರಮೇಶ್ ಎಂಬವರು ತಮ್ಮ ವಾಹನದಲ್ಲಿ ಹೋಗುವಾಗ ಹುಲಿಯನ್ನು ನೋಡಿದ್ದಾರೆ. ಹುಲಿ ನೋಡಿದ ತಕ್ಷಣ ಅವರು ತಮ್ಮ ವಾಹನ ನಿಲ್ಲಿಸಿ, ಮೊಬೈಲಿನಲ್ಲಿ ಅದರ ದೃಶ್ಯವನ್ನು ಸೆರೆ ಹಿಡಿದು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಶಿರಸಿ ವಿಭಾಗದ ದೇವನಮನೆ ಗಾಟ್‍ನ ಮತ್ತಿಗಟ್ಟದಲ್ಲಿ ಹೊಸ ಗದ್ದೆಯ ಮಂಜುಗೌಡ ಹಾಗೂ ಆಕೆಯ ಚಿಕ್ಕಮ್ಮ ಭದ್ರೆ ಕೃಷ್ಣಗೌಡ ಎಂಬವರ ಮೇಲೆ ಹುಲಿ ದಾಳಿ ಮಾಡಲು ಪ್ರಯತ್ನಿಸಿತ್ತು.

ಇದಾದ ಬಳಿಕ ಮತ್ತಿಗಟ್ಟದಲ್ಲಿ ದನವನ್ನು ತಿಂದುಹಾಕಿತ್ತು. ಈಗ ದಾಂಡೇಲಿ ಭಾಗದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಆತಂಕಕ್ಕೀಡು ಮಾಡಿದೆ.
ಅರಣ್ಯ ಇಲಾಖೆಯವರು ಕೂಡಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ