ಪೈಲಟ್ ಪ್ರಾಜಕ್ಟ್ ಈಗಷ್ಟೇ ಮುಗಿದಿದೆ; ಇನ್ನೂ ರೀಯಲ್ ಪ್ರಾಜೆಕ್ಟ್ ಬಾಕಿಯಿದೆ: ಪ್ರಧಾನಿ ಮೋದಿ

ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಘೋಷಿಸಿದ ಬೆನ್ನಲ್ಲೇ ಪರೋಕ್ಷವಾಗಿ ಪಾಕ್ ಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ, ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಪ್ರಾಯೋಗಿಕ ಅಷ್ಟೆ, ನಿಜವಾದದ್ದು ಇನ್ನು ಬಾಕಿ ಇದೆ ಎಂದು ಹೇಳಿದ್ದಾರೆ.

ವಿಜ್ಞಾನ ಭವನದಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ,ಯಾವುದೇ ಪ್ರಾಜೆಕ್ಟ್ ತಯಾರಿಸುವ ಮೊದಲು ಪೈಲಟ್ ಪ್ರಾಜೆಕ್ಟ್ ಮಾಡಲಾಗುತ್ತದೆ. ಆ ಪೈಲೆಟ್ ಪ್ರಾಜೆಕ್ಟ್ ಈಗಷ್ಟೇ ಮುಗಿದಿದೆ ಎಂದರು.

ಪೈಲಟ್ ಪ್ರಾಜೆಕ್ಟ್ ಈಗ ಪೂರ್ಣಗೊಂಡಿದ್ದು ರಿಯಲ್ ಪ್ರಾಜೆಕ್ಟ್ ಬಾಕಿ ಇದೆ. ರಿಯಲ್ ಪ್ರಾಜೆಕ್ಟ್ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.

ವಿಜ್ಞಾನ ದಿವಸ ಎಂದ ಕೂಡಲೇ ನಮಗೇ ರಾಮನ್ ಅವರ ಸಿದ್ಧಾಂತ ನೆನಪಾಗುತ್ತದೆ. ವಿಜ್ಞಾನಿಗಳು ದೇಶಕ್ಕೆ ನೀಡಿದ ಕೊಡುಗೆ ಅಪಾರ. ನಿಮ್ಮ ಪ್ರಯತ್ನ, ಕಾರ್ಯಗಳು ದೇಶಕ್ಕೆ ಲಾಭ ನೀಡಿದೆ ಎಂದರು.

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂದ ಪ್ರಧಾನಿಗಳು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದರು. ವಿಜ್ಞಾನವನ್ನು ಸಮಾಜದೊಂದಿಗೆ ಜೋಡಣೆ ಮಾಡಿ ಜನರ ಅಗತ್ಯಗಳನ್ನು ಪೂರೈಕೆ ಮಾಡಬೇಕು. ವಿಶ್ವಮಟ್ಟದಲ್ಲಿ ನಮ್ಮ ವಿಜ್ಞಾನದ ಬಗ್ಗೆ ಉತ್ತಮ ಅಭಿಪ್ರಾಯ ಇದೆ. ನಮ್ಮ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ. ಅಂತರಿಕ್ಷ ಮಾನವನನ್ನು ಕಳಹಿಸುವ ನಮ್ಮ ನಮ್ಮ ಗುರಿ ತಲುಪಬೇಕಿದೆ ಎಂದು ಹೇಳಿದರು.

Pilot project ho gaya, abhi real karna hai’: PM Modi at Vigyan Bhavan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ