ತಂದೆಯೇ ಮಗನಿಗೆ ಸಿಗರೇಟ್‍ನಿಂದ ಸುಟ್ಟಿದ್ದರಿಂದ ದೇಹವೆಲ್ಲಾ ಗಾಯ-ಚಿಕಿತ್ಸೆ ಫಲಕಾರಿಯಾಗದೆ ಮಗನ ಸಾವು

ಕೋಲಾರ, ಫೆ.27- ಮನೆಯಲ್ಲಿ ತುಂಟಾಟ ಮಾಡುತ್ತಿದ್ದಕ್ಕೆ ತಂದೆಯೇ ಮಗನನ್ನು ಸಿಗರೇಟ್‍ನಿಂದ ಮೈಯೆಲ್ಲಾ ಸುಟ್ಟ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಪೃಥ್ವಿ (3) ಮೃತಪಟ್ಟ ಮಗು. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಮಾರುತಿ ಬಡಾವಣೆಯಲ್ಲಿ ಕಳೆದ 4 ದಿನಗಳ ಹಿಂದೆ ಈ ಘಟನೆ ನಡೆದಿದ್ದು , ತಡವಾಗಿ ಬೆಳಕಿಗೆ ಬಂದಿದೆ.

ಮೃತ ಬಾಲಕನ ತಂದೆ ಹರೀಶ್ ಮಗುವಿನ ದೇಹವನ್ನು ಸಿಗರೇಟ್‍ನಿಂದ ಸುಟ್ಟಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಮಗು ಸಾವನ್ನಪ್ಪಿದ್ದಾನೆ. ಮೃತ ಮಗುವಿನ ತಾತ ಪೊಲೀಸರಿಗೆ ದೂರು ನೀಡಿದ್ದು, ತಂದೆ ಹರೀಶ್ ಪರಾರಿಯಾಗಿದ್ದಾನೆ.

ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ