ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಗೋರಖ್ ಪುರ್ : ರೈತರ ಖಾತೆಗೆ ವಾರ್ಷಿಕ 6,000 ಹಣ ವರ್ಗಾವಣೆಯಾಗುವ ಪಿಎಂ-ಕಿಸಾನ್‌ ಸಮ್ಮಾನ್‌ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಉತ್ತರ ಪ್ರದೇಶದ ಘೋರಖ್ ಪುರ್ ನಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಧ್ಯವರ್ತಿಗಳ ಹಾವಳಿಯಿಲ್ಲದೇ ರೈತರ ಖಾತೆಗೆ ವರ್ಷಿಕ 6,000 ನೇರವಾಗಿ ಹಣ ವರ್ಗಾವಣೆಯಾಗುವ ಯೋಜನೆ ಇದಾಗಿದೆ ಎಂದರು.

ದೇಶಾದ್ಯಂತ ಇರುವ ರೈತ ಸಹೋದರ ಸಹೋದರಿಯರಿಗೆ ಧನ್ಯವಾದಗಳು. 2 ಲಕ್ಷ ಗ್ರಾಮಗಳಲ್ಲಿ ಸಾವಿರಾರು ರೈತರು ಒಂದೆಡೆ ಸೇರಿದ್ದಾರೆ. ಇಂದಿನ ದಿನ ಸಾಮಾನ್ಯ ದಿನವಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಜೈಜವಾನ್, ಜೈಕಾಸಾನ್ ಎಂದಿದ್ದರು. ನಾವಿಂದು ದೇಶದ ರೈತರ ಆಮೂಲಾಗ್ರ ಅಭಿವೃದ್ಧಿ ಮಾಡುತ್ತಿದ್ದೇವೆ. ದೇಶದ ಇತಿಹಾಸದಲ್ಲಿ ಇಂದು ಮಹತ್ವದ ದಿನವಾಗಿದೆ. ಸ್ವಾತಂತ್ರ್ಯಾ ನಂತರ ರೈತರ ಪರವಾದ ಅತಿದೊಡ್ಡ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

ಈ ಯೋಜನೆಗೆ ಮೊದಲ ಸಾಕ್ಷಿ ಗೋರಖ್ ಪುರ. ಗೋರಕ್ ಪುರಕ್ಕಾಗಿ 10 ಕೋಟಿ ಅನುದಾನ ನೀಡಲಾಗಿದೆ. ರೈತರ ಖಾತೆಗೆ ನೇರವಾಗಿ ವಾರ್ಷಿಕ 6,000 ರೂ ವರ್ಗಾವಣೆಯಾಗುತ್ತದೆ. ಈಗಾಗಲೇ 1 ಕೋಟಿ 1 ಲಕ್ಷ ರೈತರ ಖಾತೆಗೆ ಹಣ ವರ್ಗಾವಣೆಯಾಗಿದೆ. ಇನ್ನು ಕೆಲವೇ ವಾರಗಳಲ್ಲಿ ಉಳಿದ ರೈತರ ಖಾತೆಗೂ ಹಣ ವರ್ಗಾವಣೆಯಾಗುತ್ತದೆ ಎಂದು ಮೋದಿ ತಿಳಿಸಿದರು.

ಹಿಂದಿನ ಸರ್ಕಾರಗಳು ಕೇವಲ ಕಾಗದಗಳಲ್ಲಿ ಯೋಜನೆಗಳನ್ನು ರೂಪಿಸಿದರು. ಆದರೆ ಅವರಾರಿಗೂ ರೈತರ ಅಭಿವೃದ್ಧಿ ಬಗ್ಗೆ ಕಾಳಜಿ ಇರಲಿಲ್ಲ. ರೈತರ ಉದ್ದಾರ ಮಾಡುವ ಉದ್ದೇಶವಿರಲಿಲ್ಲ. ರೈತರು ಸಣ್ಣ ಸಣ್ಣ ಕೆಲಸಗಳಿಗೂ ಪರದಾಡುವಂತೆ ಮಾಡಲಾಗಿತ್ತು. 2014ರಲ್ಲಿ ನಮ್ಮ ಸರ್ಕಾರ ರಚನೆಯಾದ ಬಳಿಕ ರೈಅರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದೆವು, ರೈತರ ಪರವಾಗಿಯೇ ನಾವು ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು.

ಯೋಜನೆ ಮೊದಲ ಕಂತಾಗಿ ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿನ ಒಂದು ಕೋಟಿಗೂ ಅಧಿಕ ರೈತರ ಖಾತೆಗೆ ತಲಾ 2,000 ರೂ. ಜಮಾ ಮಾಡಲಾಗುತ್ತದೆ.

ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ 75,000 ಕೋಟಿ ರೂ.ಗಳ ಪಿಎಂ-ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಪ್ರಕಟಿಸಿತ್ತು. ಎರಡು ಹೆಕ್ಟೇರ್‌ ವರೆಗೆ ಜಮೀನು ಹೊಂದಿರುವ ದೇಶದ ಸಣ್ಣ ಮತ್ತು ಮಧ್ಯವರ್ಗದ 12 ಕೋಟಿ ರೈತರಿಗೆ ಈ ಯೋಜನೆ ಲಭ್ಯವಾಗಲಿದೆ. ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ.ಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.

PM Modi to inauguration ‘Kisan Samman Nidhi Yojana

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ